ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವಿಗಳಿಂದ ಕವನಗಳ ಆಹ್ವಾನ

ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ
ಬಹುಭಾಷಾ ಕವಿಗೋಷ್ಠಿಗೆ ಕವನಗಳನ್ನು ವಾಚನ
ಮಾಡಲು ಆಸಕ್ತರಾಗಿರುವ ಕವಿ/ ಕವಯತ್ರಿಯರಿಂದ
ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಕವಿ/
ಕವಯತ್ರಿಯರು ಯಾವುದೇ ಒಂದು ಭಾಷೆಯ ಒಂದು
ಕವನವನ್ನು ಸೆಪ್ಟೆಂಬರ್ 21ರ ಸಂಜೆ 5 ಗಂಟೆ ಒಳಗಾಗಿ
ಕಳುಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು
ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ
ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು,
ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ,
ಉರ್ದು, ತಮಿಳು, ಮಲಯಾಳಂ, ತೆಲುಗು, ಮರಾರಿ,
ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು
‘ಕನ್ನಡ’ಲಿಪಿಯಲ್ಲಿ ಹಾಗೂ ಹಿಂದಿ ಇಂಗ್ಲಿಷ್ ಕವನವನ್ನು
ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ
ಭಾಷೆಯ ಚುಟುಕು ಕವನ(4 ಸಾಲಿನ ಗರಿಷ್ಠ 4 ಕವನಗಳಿಗೆ
ಮಾತ್ರ ಅವಕಾಶ)ಗಳು, ಮಕ್ಕಳ ಕವನ(6 ರಿಂದ 14 ವರ್ಷ
ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ.ಮಕ್ಕಳ
ಕವನ ಕಳುಹಿಸುವವರು ತರಗತಿ ಹಾಗೂ ಶಾಲೆಯ
ವಿವರವನ್ನು ನಮೂದಿಸಬೇಕು.

ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ವಾಟ್ಸಾಪ್-9113069827 ಅಥವಾ 9731469871 ಮೂಲಕ ಕಳುಹಿಸಬಹುದು.

ಕವನಗಳನ್ನು ಅಕ್ಷರಗಳು ತಪ್ಪಿಲ್ಲದಂತೆ ಟೈಪ್ ಮಾಡಿ ಕಳುಹಿಸಬೇಕು.
ವಾಟ್ಸಾಪ್ ನಲ್ಲಿ ಕವನದ ಛಾಯಾ ಪ್ರತಿಯನ್ನು ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ., ವಾಟ್ಸಾಪ್ ಇಲ್ಲದಿರುವವರು ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬಹುದು.

ವಿಳಾಸ- ಅಧ್ಯಕ್ಷರು, ಬಹುಭಾಷಾ ಕವಿಗೋಷ್ಠಿ ಸಮಿತಿ, ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-571201.

ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಬಹುಭಾಷಾ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು. ಅಂಚೆ ಮೂಲಕ ಕಳುಹಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಕವನಗಳ ನಿಬಂಧನೆಗಳು: ಯಾವುದೇ ಭಾಷೆಯಲ್ಲಿ ಸ್ವರಚಿತ, ಸಾಮಾಜಿಕ ಜಾಲ ತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗದ ಕವನಗಳನ್ನು ಮಾತ್ರ ಕಳುಹಿಸಬೇಕು. ಕವನಗಳು ಗರಿಷ್ಠ ೨೦ ಸಾಲುಗಳನ್ನು ಮೀರಬಾರದು. ಯಾವುದೇ ಭಾಷೆಯ ಒಂದು ಕವನವನ್ನು ಮಾತ್ರ ಆಯ್ಕೆಗೆ ಕಳುಹಿಸಬೇಕು. ಎರಡರಡು ಭಾಷೆಗಳಲ್ಲಿ ಒಬ್ಬರೇ ಕವನಗಳನ್ನು ಕಳುಹಿಸಿದಲ್ಲಿ ಅವರ ಎಲ್ಲಾ ಕವನಗಳನ್ನು ತಿರಸ್ಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್- 9945411821 ಇವರನ್ನು ಸಂಪರ್ಕಿಸಬಹುದು.

ಆಯ್ಕೆಯಾದ ಕವನಗಳ ವಾಚನಕ್ಕೆ ಬಹುಭಾಷಾ ಕವಿಗೋಷ್ಠಿಯೊಂದು ಅವಕಾಶ ಕಲ್ಪಿಸಲಾಗುತ್ತದೆ.
ಗೋಷ್ಠಿಯಲ್ಲಿ ಕವಿಗಳು ಕಡ್ಡಾಯವಾಗಿ ಆಯ್ಕೆಯಾದ ಕವನವನ್ನಷ್ಟೇ ವಾಚಿಸಬೇಕು. ಕವನಗಳನ್ನು ಹಾಡುವಂತಿಲ್ಲ ಮತ್ತು ಯಾವುದೇ ಪೀಠಿಕೆಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಮಾನವೇ
ಅಂತಿಮವಾಗಿರುತ್ತದೆ.ವಿವಾದಾತ್ಮಕ ಕವನಗಳನ್ನು ಪರಿಗಣಿಸುವುದಿಲ್ಲ. ಕವಿಗೋಷ್ಠಿ ನಡೆಯುವ ದಿನಾಂಕ ಹಾಗೂ ಸ್ಥಳವನ್ನು ನಂತರ ತಿಳಿಸಲಾಗುತ್ತದೆ
ಎಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!