ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜಯಾದ್ರಿ ಪರ್ವತಕ್ಕೆ ಚಾರಣ

” ವಿಜಯಾದ್ರಿ ಪರ್ವತ ” ಕೊಪ್ಪಳ ಜಿಲ್ಲೆಯ ಹೊಸಳ್ಳಿ ಹತ್ತಿರವಿರುವ ಕಾಸನಕಂಡಿ ಎಂಬಲ್ಲಿದೆ.
ಇದು ತುಂಗಭದ್ರಾ ಜಲಾಶಯದ ಹಿನ್ನೀರಿನ ಸಮೀಪದಲ್ಲಿರುವ ಒಂದು ಸುಂದರವಾದ ಬೆಟ್ಟ ಮತ್ತು ಧಾರ್ಮಿಕ ಕ್ಷೇತ್ರವಾಗಿದೆ.
ಇದು ಪ್ರಕೃತಿ ರಮಣೀಯ ತಾಣವಾಗಿದೆ. ಬೆಟ್ಟದ ಮೇಲಿರುವ ಶ್ರೀ ವೀರಾಂಜನೇಯ ದೇವಸ್ಥಾನವು ಅತ್ಯಂತ ಸುಂದರವಾದದ್ದು.

ಈ ದೇವಸ್ಥಾನದಲ್ಲಿ ಅಖಂಡ ರಾಮಾಯಣವನ್ನು ದಿನಾಂಕ 16-11-2022 ರಿಂದ ಇವತ್ತಿನವರೆಗೂ ಪಠಣ ಮಾಡುತ್ತಿದ್ದಾರೆ. ಪ್ರತಿ ದಿನ ಇಪ್ಪತ್ತು ನಾಲ್ಕು ಗಂಟೆ ಅಖಂಡ ರಾಮಾಯಣವನ್ನು ಪಠಣ ಮಾಡುತ್ತಿದ್ದಾರೆ.

ಇಲ್ಲಿಂದ ತುಂಗಭದ್ರಾ ನದಿಯ ಹಿನ್ನೀರಿನ ಅದ್ಭುತ ನೋಟ ಕಣ್ಣಿಗೆ ಮುದ ನೀಡುತ್ತದೆ. ಪ್ರಕೃತಿ ಪ್ರೇಮಿಗಳು ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಬಯಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.

ಈ ಅದ್ಬುತ ತಾಣಕ್ಕೆ ಕೊಪ್ಪಳ-ಭಾಗ್ಯನಗರದ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ ಆಂಜಿನೇಯ ಬಡಾವಣೆ ವಾಕಿಂಗ್ ಗೆಳೆಯರ ಬಳಗದಿಂದ ರವಿವಾರ ವಿಜಯಾದ್ರಿ ಪರ್ವತಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಚಾರಣದಲ್ಲಿ ವಾಕಿಂಗ್ ಗೆಳೆಯರ ಬಳಗದ ಮಂಜುನಾಥ್ ತಿಮ್ಮಲಾಪುರ, ವಿದ್ಯಾಧರ, ಶಿವಾನಂದ, ಕಳಕಯ್ಯ, ಯೋಗಾನಂದ, ದುರಗಪ್ಪ ಮತ್ತು ಸಂತೋಷ ದರ್ನ ಹಾಗೂ ಇತರರು ಪಾಲ್ಗೊಂಡಿದ್ದರು.
ಇಂತಹ ಅದ್ಬುತವಾದ ಪ್ರಕೃತಿ ಮತ್ತು ಧಾರ್ಮಿಕ ಸ್ಥಳಕ್ಕೆ ನೀವು ಒಮ್ಮೆ ಹೋಗಿ ಬನ್ನಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!