ಮಧುಮಕ್ಕಳಿಗೆ ಶುಭ ಕೋರಿದ ಪುಷ್ಪಗುಚ್ಛವೊಂದು
ಕೈಸೇರಿತು ವಿಲೇವಾರಿ ಮಾಡುವ ಸದವಕಾಶವೊಂದು
ಸುಸ್ಥಿತಿಯ ಕೇಸರಿ ಬಿಳಿ ಹೂಗಳ ಸಂಗ್ರಹಿಸಿದೆನಂದು
ಉದುರಿದ್ದ ಗರಿಗಳ ಜೊತೆಯಲಿ ಸಿಂಗರಿಸಿದೆ ನೊಂದು
ಪಕಳೆಗಳಲಿ ಅರಳಿರುವ ಸುಲಲಿತ ಚಿತ್ತಾರವಿದು
ಸುಪ್ರಭಾತದಲಿ ಮೂಡಿರುವ ಕಾವ್ಯೋದಯವಿದು
ರಸದೌತಣದ ಕೊಡುಗೆಯು ಕಲೋಪಾಸಕರಿಗಿಂದು
ಆಸ್ವಾದಿಸುತ ಆನಂದಿಸಲು ನಾವುನೀವು ಎಂದೆಂದು
- ಲಲಿತಾ ಕೆ ಆಚಾರ್, ಬೆಂಗಳೂರು




















