ಬಳ್ಳಾರಿ / ಕಂಪ್ಲಿ : ಗುರು ಪೂರ್ಣಿಮೆ ಹಾಗೂ 22 ನೇ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ. ಜು.29 ರಂದು ವಿಶೇಷ ಪೂಜೆ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಯಿಬಾಬ ಮಂದಿರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 5 ಗಂಟೆಗೆ ಸಾಯಿಬಾಬ ಮಂದಿರದಲ್ಲಿ ಕಾಕಡಾರತಿ, ಬೆಳಿಗ್ಗೆ 7 ಗಂಟೆಗೆ ಸಾಯಿಬಾಬ ಅವರ ಅಮೃತಶಿಲೆ ಪ್ರತಿಮೆಗೆ ಸಕಲ ಸದ್ಭಕ್ತರಿಂದ ಕ್ಷೀರಾಭಿಷೇಕ, 12 ಗಂಟೆಗೆ ಅನ್ನಸಂರ‍್ಪಣೆ, ಸಂಜೆ 5-30ಕ್ಕೆ ವಿವಿಧ ಸಾಂಸ್ಕೃತಿಕ ಕರ‍್ಯಕ್ರಮಗಳು ಹಾಗೂ ಸಾಯಿಬಾಬಾ ಚರಿತ್ರೆಯ ನೃತ್ಯ ಸಂಯೋಜನೆ ಕಾರ‍್ಯಕ್ರಮವನ್ನು ಜಿಲಾನಿ ಬಾಷಾರವರ ಶ್ರೀ ನಾಟ್ಯ ಲಕ್ಷ್ಮೀ ಟ್ರಸ್ಟ್ ಕಂಪ್ಲಿ ಇವರಿಂದ ನಡೆಯಲಿದೆ.
ಸಂಜೆ 6-15ಕ್ಕೆ ಸಂಧ್ಯಾ ಆರತಿ, 7-15ಕ್ಕೆ ಸಾಯಿಬಾಬಾ ಅವರ ವಿಶೇಷ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ 8 ಗಂಟೆಗೆ ಶೇಷ ಆರತಿ ಕರ‍್ಯಕ್ರಮಗಳು ನಡೆಯಲಿವೆ.
ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ, ಸ್ವಾಮಿವಿವೇಕಾನಂದ ಚಾರಿಟಬಲ್ ರಕ್ತ ಕೇಂದ್ರ ಬಳ್ಳಾರಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಇರುತ್ತದೆ, ಯುವಕ, ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಮಂದಿರದ ಪದಾಧಿಕಾರಿಗಳು ಮನವಿ ಮಾಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















