ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕಮ್ಮಾರಗಟ್ಟೆ ಗ್ರಾಮದಲ್ಲಿ ಹೊಲದಲ್ಲಿ ಹಾವು ಕಚ್ಚಿ ರೈತ ಮಂಗಾಪುರಿ ಹನುಮೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವು
ಮಂಗಪುರಿ ಹನುಮೇಶ್ (45) ಗುರುವಾರ ಜಮೀನಿಗೆ ನೀರು ಹರಿಸಲು ಹೋಗಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಜಮೀನಿನಲ್ಲಿಯೇ ಮೃತಪಟ್ಟಿದ್ದಾರೆ ಹನುಮೇಶ್
ಈ ಬಗ್ಗೆ ಪಕ್ಕದ ಜಮೀನಿನ ಗೋವಿಂದರಾಜ್ ಅವರು ಹನುಮೇಶ್ ಅವರ ಪುತ್ರ ವೀರೇಶ್ ಅವರಿಗೆ ಮಾಹಿತಿ ನೀಡಿದ್ದರು.ತಕ್ಷಣ ಸ್ಥಳಕ್ಕೆ ಬಂದು ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಿದ್ದರು ವಿಷಪೂರಿತ ಹಾವು ಕಚ್ಚಿದ್ದನ್ನು ವೈದ್ಯಾಧಿಕಾರಿಗಳು ದೃಢಪಡಿಸಿದ್ದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್ ಮುದ್ದುರಾಜ್ ತಿಳಿಸಿದ್ದಾರೆ.



















