ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೂಸ್ಟೂರ ಹತ್ತಿರದ ಕುಂಟೋಜಿ ಕಾದಿಟ್ಟ ಅರಣ್ಯದಲ್ಲಿ ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಕ್ಲೀನ್ ಅಂಡ್ ಗ್ರೀನ್ ಫೋರ್ಸ್,ಶ್ರೀ ರಾಮನಗರ ವತಿಯಿಂದ ಕುಂಟೋಜಿ ಕಾಯ್ದಿಟ್ಟ ಅರಣ್ಯ (ಡಗ್ಗಿ) ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಲಾಯಿತು.
ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಶ್ರೀ ರಾಮನಗರ ವತಿಯಿಂದ ಹಲವು ವರ್ಷಗಳ ಹಿಂದೆ ಕುಂಟೋಜಿ ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಮಾಡಲು ಸುಮಾರು ನೂರಕ್ಕೂ ಹೆಚ್ಚು ತೊಟ್ಟಿಗಳನ್ನು ನಿರ್ಮಿಸಲಾಗಿತ್ತು.ಅದರಲ್ಲಿ ಕೆಲವು ಕಳುವಾಗಿದ್ದು ಇನ್ನು ಕೆಲವು ವಿಕೃತ ಮನೋಭಾವದ ಮನುಷ್ಯರಿಂದ
ಧ್ವಂಸಗೊಂಡಿವೆ.
ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ ಮನೆಗೊಂದು ಮರ,ಊರಿಗೊಂದು ವನ,ಹೋಬಳಿಗೊಂದು ಕಾಡು ಈ ರೀತಿ ಪರಿಸರವನ್ನು ಸಂರಕ್ಷಿಸಿದ್ದಲ್ಲಿ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ದೊರೆಯುತ್ತದೆ ಇಲ್ಲವಾದಲ್ಲಿ ಈಗಾಗಲೇ 42° ಗೆ ಹೋಗಿರುವ ಬಿಸಿಲಿನ ತಾಪಮಾನ ಇನ್ನು ಹೆಚ್ಚಾಗುವ ಸಾಧ್ಯತೆಯಿದ್ದು ಕಷ್ಟದ ದಿನಗಳನ್ನು ಎದುರಿಸುವ ಪರಿಸ್ಥಿತಿ ಬರಬಹುದು ಎಂದು ತಾಲೂಕು ಪಂಚಾಯಿತಿ ಸದಸ್ಯರು ಮತ್ತು ಕ್ಲೀನ್ ಅಂಡ್ ಗ್ರೀನ ಫೋರ್ಸ್, ಶ್ರೀರಾಮನಗರದ ಮುಖ್ಯಸ್ಥರಾದ ಮೊಮ್ಮದ್ ರಫಿ ಅವರು ತಿಳಿಸಿದರು.
ಬೇಸಿಗೆಯ ಸಮಯ ಎಲ್ಲರೂ ಕೈಲಾದಷ್ಟು ಪ್ರಾಣಿ-ಪಕ್ಷಿಗಳಿಗೆ ನೀರು,ಆಹಾರದ ವ್ಯವಸ್ಥೆ ಮಾಡಿ ಎಂದು ಕಿಷ್ಕಿಂಧ ಯುವ ಚಾರಣ ಬಳಗದ ಸೌಮ್ಯಶ್ರೀ ಅವರು ಎಲ್ಲರಲ್ಲಿ ಮನವಿ ಮಾಡಿದರು.
ಕಿಷ್ಕಿಂಧ ಯುವ ಚಾರಣ ಬಳಗದ ಸದಸ್ಯರಾದ ನಿರುಪಾದಿ ಭೋವಿ ಮಾತನಾಡಿ ನಮ್ಮ ಭಾಗದಲ್ಲಿ ಇಂತಹ ದಟ್ಟವಾದ ಅರಣ್ಯ ಇರುವುದು ಯಾರಿಗೂ ಗೊತ್ತಿಲ್ಲ.ಇಲ್ಲಿ ಅನೇಕ ಪ್ರಭೇದದ ಪ್ರಾಣಿ,ಪಕ್ಷಿಗಳು ಇವೆ.ಮುಖ್ಯವಾಗಿ ಸಾವಿರಾರು ಸಂಖ್ಯೆಯಲ್ಲಿ ನವಿಲುಗಳು ಇದ್ದು ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಈ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಲ್ಲಿ ಸೂಕ್ತ ಕ್ರಮಗಳನ್ನು,ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಆಗ್ರಹಿಸಿದರು.
ಈ ಒಂದು ಮಾದರಿ ಸಮಾಜಮುಖಿ ಕಾರ್ಯದಲ್ಲಿ ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ನ ಸದಸ್ಯರಾದ ಸತೀಶ್,ರವಿ ನಾಯಕ್,ಸುಮಂಗಲ,ಶಿವಕುಮಾರ್,ಸೋಮು ಕುದುರಿಹಾಳ್,ಮಂಜುಳಾ ಶೆಟ್ಟಿ,ಸಿಂಧು ಮುತ್ತು ಬಂಗಿ,ಮದ್ದಾನಪ್ಪ,ಸಂತೋಷ್ ಕುಂಬಾರ್, ಚನ್ನಬಸವ ಬಳ್ಳೊಳ್ಳಿ,ಪಂಪಾಪತಿ ಮುದುಗಲ್, ಪ್ರಕಾಶ್,ರಮೇಶ್ ಹರನಾಯಕ್,ಮಂಜುನಾಥ್ ಇಂಡಿ,ಚಾರ್ವಿ,ಅರ್ಜುನ್ ಜಿ.ಆರ್,ಹನುಮೇಶ ಭಾವಿಕಟ್ಟಿ ಡಣಾಪೂರ ಪಾಲ್ಗೊಂಡಿದ್ದರು.
ವರದಿ:ಹನುಮೇಶ ಭಾವಿಕಟ್ಟಿ