ಬೆಂಗಳೂರು ನಗರದ ಬಾನಸೋಡು ಏರಿಯಾದ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳಿಗೆ ವನಸಿರಿ ಫೌಂಡೇಶನ್ ಸದಸ್ಯರು ಬೇಸಿಗೆಯಿಂದ ಪಕ್ಷಿಗಳು ನೀರಿಗಾಗಿ ಅಲೆದಾಡುತ್ತಿರುವುದನ್ನು ಕಂಡು ಪ್ಲಾಸ್ಟಿಕ್ ಡಬ್ಬಗಳನ್ನು ಕಟ್ಟು ಮಾಡಿ ಮರಗಳಿಗೆ ಕಟ್ಟಿ ನೀರು ಹಾಕಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಪಕ್ಷಿಗಳ ಮೇಲೆ ಮಾನವೀಯತೆ ತೋರಿದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ವನಸಿರಿ ಫೌಂಡೇಶನ್ ಗ್ರಾಮ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರಾದ ಯಮನೂರ ನಾಯಕ ಮತ್ತು ಅವರ ಸ್ನೇಹಿತರು ಗ್ರಾಮದಲ್ಲಿ ಮಳೆಯಿಲ್ಲದೆ ಸದ್ಯ ದುಡಿಯಲು ಯಾವುದೇ ಕೆಲಸಗಳು ಇಲ್ಲದಿರುವಾಗ ಬೆಂಗಳೂರಿನ ಬಾನಸೋಡಿ ಏರಿಯಾದಲ್ಲಿ ದುಡಿಯಲು ಹೋಗಿರುವಾಗ ಪಕ್ಷಿಗಳು ನೀರಿನ ದಾಹ ತೀರಿಸಿಕೊಳ್ಳಲು ಅಲೆದಾಡುತ್ತಿರುವುದನ್ನು ಕಂಡು ಬೆಂಗಳೂರಿನ ಗಿಡಮರಗಳಿಗೆ ಪ್ಲಾಸ್ಟಿಕ್ ಡಬ್ಬಿಗಳನ್ನು ಕಟ್ಟಿ ನೀರಿನ ದಾಹ ತೀರಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸದಸ್ಯರಾದ ಪ್ರಕಾಶ,ಪ್ರವೀಣ,ಬಸವರಾಜ,ಯಮನೂರ ನಾಯಕ ಹಾಗೂ ರಾಯಚೂರಿನ ಯುವಕರಿದ್ದರು.