ಹಾವೇರಿ:ಲೋಕಸಭಾ ಚುನಾವಣೆಯ ಅಂಗವಾಗಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯ ಬಸಾಪುರ-ರಾಮಗೇರಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಡಾ.ಚಂದ್ರು ಕೆ.ಲಮಾಣಿ ಯವರು ರೋಡ್ ಶೋ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿ,ಬಿಜೆಪಿ ಬೆಂಬಲಿಸಿ ಮತ ನೀಡುವಂತೆ ಕೇಳಿಕೊಳ್ಳಲಾಯಿತು.
ರೋಡ್ ಶೋ ನಲ್ಲಿ ಸಾವಿರಾರು ಯುವಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಭಾಗವಹಿಸಿ,ಬಿಜೆಪಿ ಬೆಂಬಲಿಸಿ, ಘೋಷಣೆ ಕೂಗಿದರು.
ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರಕಾರದ ಸಾಧನೆಗಳು ಹಾಗೂ ಜನಪರ ಯೋಜನೆಗಳ ಕುರಿತು ಮಾತನಾಡಿ,ಕರ್ನಾಟಕ ರಾಜ್ಯಕ್ಕೆ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದ ಶ್ರೀ ಬಸವರಾಜ ಬೊಮ್ಮಾಯ ಯವರಿಗೆ ಅತಿ ಹೆಚ್ಚು ಮತಗಳನ್ನು ನೀಡುವಂತೆ ಮನವಿ ಮಾಡಲಾಯಿತು.
ರೋಡ್ ಶೋ ಪ್ರಚಾರ ಸಭೆಯಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ ರವರು ಮಾಜಿ ಶಾಸಕರಾದ ಗಂಗಣ್ಣಮ ಹಾಂತಶೆಟ್ಟರ ಯವರು ವಿಧಾನ ಪರಿಷತ ಸದಸ್ಯರಾದ ಎಸ್,ವಿ,ಸುಂಕನೂರ ಯವರು ಶಿರಹಟ್ಟಿ ಮಂಡಲದ ಅಧ್ಯಕ್ಷರಾದ ಸುನೀಲ ಮಹಾಂತೇಶೆಟ್ಟರಯವರು ಗ್ರಾಮದ ಗುರು ಹಿರಿಯರು ಪಕ್ಷದ ಮುಖಂಡರು,ವಿವಿಧ ಮೋರ್ಚಾದ ಪ್ರಮುಖರ, ಚುನಾಯಿತ ಪ್ರತಿನಿಧಿಗಳು,ಪದಾಧಿಕಾರಿಗಳು, ಕಾರ್ಯಕರ್ತರು,ತಾಯಿಂದಿರು,ಯುವಕ ಮಿತ್ರರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ