ಹನೂರು:ಚಾಮರಾಜನಗರ ಲೋಕಸಭೆ ಚುನಾವಣೆ ಅಂಗವಾಗಿ ಬೇಳ್ಳಾಲಗೌಡ ಭವನ ಲೊಕ್ಕನಹಳ್ಳಿ ಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ,ಹನೂರು ಮಂಡಲ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ.ಆರ್.ಮಂಜುನಾಥ್ ಅವರು ಮಾತನಾಡಿ ಪ್ರಧಾನಿ ಮೋದಿ ಅವರ ಕಾರ್ಯ ವೈಖರಿ ಗೆ ಮೆಚ್ಚಿ ನಮ್ಮ ವರಿಷ್ಟರಾದ ಮಾಜಿ ಪ್ರಧಾನಿ ದೇವಗೌಡರು ಹಾಗೂ ಕುಮಾರಣ್ಣ ಪಕ್ಷಕ್ಕೆ ಮೈತ್ರಿ ಆಗಿದ್ದಾರೆ ಈಗ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಒಮ್ಮತದ ಮನಸ್ಸಿನಿಂದ ಪಕ್ಷಕ್ಕೆ ದುಡಿದು ಎನ್ ಡಿ ಎ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಬಾಲರಾಜು ಅವರಿಗೆ ಜಯಶೀಲರಾಗಿ ಮಾಡಬೇಕೆಂದು ನೆರೆದಿಂತಹ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು ನಂತರ ಮಾತನಾಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ ಬಾಲರಾಜು ಅವರು ಮಾತನಾಡಿ ನಾನು ಈಗಾಗಲೇ ಸಾಕಷ್ಟು ಚುನಾವಣೆಗಳಲ್ಲಿ ಭಾಗಿಯಾಗಿ ಒಂದು ಸಾರಿ ಗೆದ್ದು ಶಾಸಕನಾಗಿ ಕೆಲಸಗಳನ್ನು ಮಾಡಿದ್ದೇನೆ ಹಲವು ಬಾರಿ ಚುನಾವಣೆಗಳನ್ನು ಎದುರಿಸಿ ಸೋಲಿನ ಅನುಭವ ಆಗಿದೆ ಆದರೆ ಈಗ ನನಗೆ ದೇವರ ಕೃಪಾ ಕಟಾಕ್ಷ ದಿಂದ ನನಗೆ ಈ ಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದೆ ಆದ್ದರಿಂದ ನಂಗೊಂದು ದಾಯ ಮಾಡಿ ಅವಕಾಶ ಕೊಡಿ ಎಂದು ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಚಾಮರಾಜನಗರ ಲೋಕ ಸಭೆಯ ಅಭ್ಯರ್ಥಿಯಾದ ಎಸ್,ಬಾಲರಾಜ್,ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎನ್.ಮಹೇಶ್,ಜಿಲ್ಲಾ ಅಧ್ಯಕ್ಷರಾದ ನಿರಂಜನ್ ಕುಮಾರ್,ಪ್ರಿತಮ್ ನಾಗಪ್ಪ,ಬಿಜೆಪಿ ಮುಖಂಡರುಗಳಾದ ದತ್ತೆಶ್ ಕುಮಾರ್,ವೆಂಕಟೇಶ್, ನಿಶಾಂತ್,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ,ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮುತ್ತುಸ್ವಾಮಿ,ಹನೂರು ಮಂಡಲ ಅಧ್ಯಕ್ಷರಾದ ರುಶ್ಬೆಂದ್ರ,ಲೋಕ್ಕನ ಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್,ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸದಾನಂದ ಮೂರ್ತಿ,ಒ.ಬಿ.ಸಿ ಜಿಲ್ಲಾ ಕಾರ್ಯದರ್ಶಿಯಾದ ರಾಜುಗೌಡ,ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ಉದ್ದನೂರು ಪ್ರಸಾದ್ ಹಾಗೂ ಕಾರ್ಯಕರ್ತರು,ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್