ಮತದಾರನಿಗೆ ನಿಮಿಷ,ರಾಜಕಾರಣಿಗೆ ಐದು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ.ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಜನಸಾಮಾನ್ಯರಿಗೆ ಲಭ್ಯವಾಗುವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿಯಾಗಿರಬೇಕು,ಯಾವುದೇ ಪಕ್ಷ, ಧರ್ಮ,ಜಾತಿ,ಪಂಥ,ಪಂಗಡ,ಅಭಿಮಾನ,ಹಣ ಮತ್ತು ಹೆಂಡಕ್ಕೆ,ಲಾಭಿಗೆ ಹಾಗೂ ಮೂಲಾಜಿಗೆ ಬೀಳದೆ ನಮ್ಮ ಮತ ಸೂಕ್ತ ವ್ಯಕ್ತಿಗೆ ಚಲಾಯಿಸಬೇಕು.ಒಬ್ಬ ರಾಜಕಾರಣಿ ಎಷ್ಟೇ ಅಧಿಕಾರ,ಸಂಪತ್ತು,ಹೆಸರು ಗಳಿಸಿ,ಅನುಭವಿಸಿದರೂ,ಕೂಡ ತಮ್ಮ ಸ್ವಾರ್ಥಕ್ಕಾಗಿ ಯಾವ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಸೇರುತ್ತಾರೋ ಗೋತ್ತಾಗಲ್ಲ.ಹಾಗಾಗಿ ನಾವುಗಳು ಬಹಳ ಎಚ್ಚರಿಕೆಯಿಂದ ಒಬ್ಬರಿಗೊಬ್ಬರು ಜಗಳವಾಡದೆ ಪ್ರೀತಿ ವಿಶ್ವಾಸದಿಂದ ಇದ್ದು.ನಮಗೆ ಬೇಕಾದವರಿಗೆ ನಮ್ಮ ಒಂದು ಮತ ತಪ್ಪದೆ ಚಲಾಯಿಸಿರಿ,ಅಭಿವೃದ್ಧಿ ಕಡೆ ನಮ್ಮ ನಡೆ ಇರಲಿ,ಹಳ್ಳಿ ಅಭಿವೃದ್ಧಿಯಾದರೆ-ದಿಲ್ಲಿ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಬಹುದು.
-ಡಿ.ಪಿ.ಸಜ್ಜನ
ಉಪನ್ಯಾಸಕರು ಮತ್ತು ಅಧ್ಯಕ್ಷರು
ಶ್ರೀ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ (ರಿ.) ಹೊನ್ನಕಿರಣಗಿ ತಾ.ಜಿ.ಕಲಬುರಗಿ.