ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡಿಪಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ ಕೊಡುವುದು ಹಾಗೂ ಕೆಲವು ದರಿದ್ರ ಪದ್ಧತಿಗಳಿಂದ ಮುಕ್ತಿ ಕೊಡುವುದು ಸುಲಭವಲ್ಲ ಆದರೆ ಇಂಥ ಕಾರ್ಯಗಳನ್ನು ಅಂಬೇಡ್ಕರ್ ಎನ್ನುವ ಶಕ್ತಿ ಮಾಡಿದೆ ಹಾಗೂ ವಿಶ್ವವೇ ನಮ್ಮ ಭಾರತವನ್ನು ನೋಡುವಂತಹ ವಿಶಾಲವಾದ ಅರ್ಥ ಮತ್ತು ಮಹತ್ವ ಹೊಂದಿರುವ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರು ನಮಗೆ ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾರೆ ಹಾಗೂ ಈ ಸಂವಿಧಾನದಲ್ಲಿ ದೇಶದಲ್ಲಿ ದೇಶದ ಕಟ್ಟ ಕಡೆಯ ಪ್ರಜೆಗೂ ಸಹ ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ ಒದಗಿಸುವುದಕ್ಕೆ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಹೆಚ್ಚಿನ ಪರಿಶ್ರಮವನ್ನು ತೆಗೆದುಕೊಂಡು ಸುಮಾರು 2 ವರ್ಷ 11 ತಿಂಗಳು 18 ಗಂಟೆಗಳ ಕಾಲ ನಮ್ಮ ದೇಶದ ಸಂವಿಧಾನವನ್ನು ಬರೆದಿದ್ದಾರೆ ಪ್ರಸ್ತುತ ನಮ್ಮ ಸಂವಿಧಾನದಲ್ಲಿ 395 ವಿಧಿಗಳು 12 ಅನುಸೂಚಿಗಳು 22 ಭಾಗಗಳನ್ನು ನಾವು ಕಾಣಬಹುದು ಇಷ್ಟು ವಿಶಾಲವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಕೊಟ್ಟಿರುವುದು ನಮ್ಮ ಪುಣ್ಯವಾಗಿದೆ ಆದರೆ ಕೇಳುವ ಅವಿವೇಕಿಗಳು ಇಂತಹ ಸಂವಿಧಾನದ ವಿರುದ್ಧವಾಗಿ ಮಾತನಾಡುವುದು ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕುವುದು ಒಂದು ಮಾರಕ ಕಾಯಿಲೆಯಾಗುತ್ತಿದೆ ಹಾಗಾಗಿ ದೇಶದ ಸಮಸ್ತ ಜನರು ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡರೆ ವಿಶ್ವದಲ್ಲಿಯೇ ನಮ್ಮ ಭಾರತ ಸಂವಿಧಾನದ ಮಹತ್ವವನ್ನು ಹಾಗೂ ದೇಶದ ಅಭಿವೃದ್ಧಿಯನ್ನ ಕಾಣಬಹುದು ಇನ್ನಾದರೂ ನಮ್ಮ ಪ್ರಜೆಗಳು ಬದಲಾಗಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರಿಗೆ ಹಾಗೂ ನಮ್ಮ ದೇಶದ ಸಂವಿಧಾನಕ್ಕೆ ಹೆಚ್ಚು ಪ್ರಾಮುಖ್ಯತೆ ಮತ್ತು ಸಮಯವನ್ನು ಕೊಟ್ಟು ನಮ್ಮ ನೈಜ ಇತಿಹಾಸವನ್ನ ತಿಳಿದುಕೊಂಡು ದೇಶದ ಪ್ರಗತಿಗೆ ಮತ್ತು ಶಾಂತಿ ಸಮಾನತೆಗೆ ಶ್ರಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ..
-ಕಾರ್ತಿಕ್ ಜಿ.ಎನ್. ವಕೀಲರು,ಗುಂಡ್ಲುಪೇಟೆ