ಬಾಗಲಕೋಟೆ/ರಬಕವಿ-ಬನಹಟ್ಟಿ:ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಮರನಾಥ್ ರೆಡ್ಡಿ ಹಾಗೂ ಜಿಲ್ಲಾ ಹೆಚ್ಚುವರಿ 1 ಪೊಲೀಸ್ ಅಧೀಕ್ಷಕರು ಪ್ರಸನ್ನ ದೇಸಾಯಿ ಮತ್ತು ಜಿಲ್ಲಾ ಪೊಲೀಸ್ ಹೆಚ್ಚುವರಿ 2 ಮಹಾಂತೇಶ್ ಜಿದ್ದಿ ಮತ್ತು ಜಮಖಂಡಿಯ ಉಪ ವಿಭಾಗದ ಪೊಲೀಸ್ ಉಪ ಆಧೀಕ್ಷಕರು ಹಾಗೂ ಬನಹಟ್ಟಿ ನಗರದ ಸಿಪಿಐ ಸಂಜೀವ್ ಬಳೆಗಾರ ಇವರೆಲ್ಲರ ಜಂಟಿ ಮಾರ್ಗದರ್ಶನದಲ್ಲಿ ಬನಹಟ್ಟಿ ನಗರದ ಪೊಲೀಸ್ ಠಾಣೆ ಅಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಹಾಗೂ ಅಪರಾಧ ವಿಭಾಗದ ಪಿಎಸ್ಐ ಡಿ ಬಿ ಕೋತ್ವಾಲ್ ಹಾಗೂ ಇವರ ತನಿಖಾ ತಂಡವಾದ ಎಸ್ಎಸ್ ಬಾಬಾನಗರ ಎಎಸ್ಐ,ಪೊಲೀಸ್ ಸಿಬ್ಬಂದಿ ಜನರಾದ ಎಂ ಡಿ ಸೌದಿ,ಡಿ ಬಿ ಕುಂಬಾರ್, ಶ್ರೀಮಂತ ಹುಕ್ಕೇರಿ ವಿ ಎಸ್ ಅಜ್ಜನಗೌಡರ್ ಎ ಎಂ ಜಮಖಂಡಿ ಇವರೆಲ್ಲರೂ ಸೇರಿ 8-4-2024 ರಂದು ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದ ಜಲಾಶಯ ಹತ್ತಿರ ವಾಹನಗಳನ್ನು ಪರಿಶೀಲಿಸುತ್ತಿರುವಾಗ ಸಂಶಯಾಸ್ಪದವಾಗಿ ಕಳ್ಳತನ ಮಾಡಿದ ಮೋಟರ್ ಸೈಕಲ್ ಸಮೇತ ಸಿಕ್ಕ ಆರೋಪಿ ವಿಶ್ವನಾಥ್ ವಿಟ್ಟಲ್ ಗುರವ್ವ ವಯಸ್ಸು 24 , ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ, ನಂದೇಶ್ವರ ಗ್ರಾಮದ ಈತನಿಗೆ ದಸ್ತಗಿರಿ ಮಾಡಿದ ನಂತರ
ಕಳ್ಳತನವಾದ
1)ಯಮಹಾ ಕಂಪನಿಯ ಎಫ್ ಝೆಡ್ ಮೋಟಾರ್ ಸೈಕಲ್,
2) ನೆರೆಯ ಮಹಾರಾಷ್ಟ್ರ ರಾಜ್ಯದ ಜತ್ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟರ್ ಸೈಕಲ್ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ರೊ,
3)ರಾಯಲ್ ಎನ್ ಫೀಲ್ಡ್ ಬುಲೆಟ್ ಮೋಟಾರ ಸೈಕಲ್
4 ) ಹಾಗೂ ಹೋಂಡಾ ಕಂಪನಿಯ ಶೈನ್ ಮೋಟರ್ ಸೈಕಲ್ ಅಂದಾಜು ಒಟ್ಟು 2 ಲಕ್ಷ 40,000 ಮೌಲ್ಯದ ನಾಲ್ಕು ಮೋಟರ್ಸ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು ಆರೋಪಿತನಿಗೆ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರದಿ-ಮಹಬೂಬ್ ಎಂ ಬಾರಿಗಡ್ಡಿ