ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಡವರಿಗಾಗಿ ಹಾಗೂ ವಿಧವಾ ಮಹಿಳೆಯರಿಗಾಗಿ ಕಿಟ್ ವಿತರಿಸಿದ ಜಮೀಯತೆ ಉಲೆಮಾ ಹಿಂದ್

ರಬಕವಿ-ಬನಹಟ್ಟಿ:ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಅಂಜುಮನೆ ಇಸ್ಲಾಂ ಶಾದಿ ಮಹಲಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜಮ್ಯತೆ ಉಲೇಮ ಹಿಂದ ರಬಕವಿ ಬನಹಟ್ಟಿ ಇವರ ಆಶ್ರಯದಲ್ಲಿ ಬಡವರಿಗಾಗಿ ಹಾಗೂ ವಿಧವೆ ಮಹಿಳೆಯರಿಗೆ ರಂಜಾನ್ ಹಬ್ಬದ ಪ್ರಯುಕ್ತ ಸೂರ್ ಕುರ್ಮಾ ಆಹಾರದ ರೇಷನ್ ಕಿಟ್ಟುಗಳನ್ನು ವಿತರಿಸಿದರು.
ಈ ರಂಜಾನ್ ಹಬ್ಬದ ಆಹಾರದ ರೇಷನ್ ಕಿಟ್ ಗಳನ್ನು ರಬಕವಿ ಬನಹಟ್ಟಿ ತಾಲೂಕಿನ ನೆರೆಯ ಚಿಮ್ಮಡ,ನವಲಗಿ,ಆಸಂಗಿ,ಕೊಲ್ಲೋಳಿ,ರಬಕವಿ ಬನಹಟ್ಟಿ ರಾಂಪುರ್ ಹೊಸೂರು ಸೇರಿದಂತೆ ಬಡವರು ಹಾಗೂ ವಿಧವೆ ಮಹಿಳೆಯರನ್ನು ಗುರುತಿಸಿ ಒಟ್ಟು 450ಕ್ಕಿಂತ ಹೆಚ್ಚು ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಮಾಜಿ ಅಧ್ಯಕ್ಷ ಉಸ್ಮಾನ್ ಸಾಬ್ ಲೇಂಗರೇ,ರಬಕವಿ ನಗರ ಅಂಜುಮನ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಲಿಂಗರೇ ಹಾಗೂ ನಗರಸಭೆ ಸದಸ್ಯ ಯುನುಸ್ ಚೌಗಲ ಝಮೀಯತೆ ಉಲೆಮಾ ಹಿಂದ್ ಅಧ್ಯಕ್ಷರು ಹಾಫಿಜ್ ಉಲೇಮಾಗಳು,ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ