ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಜೀವಣ್ಣ ವಿಶ್ವಕರ್ಮ ಅವರ ಮನೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತವಾಗಿ 5 ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಶ್ರೀ ದೇವಿ ಪುರಾಣ ಪಠಣ ಮಾಡಲಾಗುತ್ತದೆ.ದಿನನಿತ್ಯ ಶ್ರೀ ಕಾಳಿಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುರಾಣ ಪ್ರವಚನ ಪ್ರಾರಂಭವಾಗಲಿದೆ.ಇಂದು ಎರಡನೆ ದಿನದ ಪೂಜೆ ಕೈಗೊಳ್ಳಲಾಯಿತು.ಕಾರ್ತೀಕ್ ವಿಶ್ವಕರ್ಮ ಎಂಬುವವರು ಪುರಾಣ ಪ್ರವಚ ಮಾಡುವರು. ದಿನನಿತ್ಯ ಕುಟುಂಬದ ಸದಸ್ಯರು,ಗ್ರಾಮದ ಭಕ್ತಾಧಿಗಳು ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕಾಳಿಕಾದೇವಿ ಕೃಪೆಗೆ ಪಾತ್ರರಾಗುವುರು.ಪುರಾಣಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಕುಟುಂಬದ ವತಿಯಿಂದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.ಸರ್ವ ಭಕ್ತಾಧಿಗಳು ಈ ಪುರಾಣ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕಾಳಿಕಾದೇವಿ ಕೃಪೆಗೆ ಪಾತ್ರರಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.