ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹುಲೇಗುಡ್ಡ ಗ್ರಾಮದ ಕುದುರಿ ಯಲ್ಲೇಶ್ವರ ನೂತನ ಮಹಾ ರಥೋತ್ಸವ

ಯಲಬುರ್ಗಾ:ತಾಲ್ಲೂಕಿನ ಹುಲೇಗುಡ್ಡ ಗ್ರಾಮದ ಕುದರಿ ಯಲ್ಲೇಶ್ವರ (ಆಂಜನೆಯ) ಜಾತ್ರೆ ಜರುಗೀತು ಮಂಗಳವಾರ ಸಾಯಂಕಾಲ ಹುಲೇಗುಡ್ಡ ಗ್ರಾಮದ ಹೊರವಲಯದಲ್ಲಿರುವ ಕುದರಿ ಯಲ್ಲೇಶ್ವರನ ದೇವಸ್ಥಾನದಲ್ಲಿ ನೂತನ ರಥೋತ್ಸವ ಸಾವಿರಾರು ಭಕ್ತರ ನಡುವೆ ಜರಗಿತು ಜಾತ್ರೆಗೆ ಗ್ರಾಮಸ್ಥರು ಭಕ್ತರ ಕಾಣಿಕೆಯಿಂದ ಈ ವರ್ಷ ಹೊಸ ರಥವನ್ನು ಮಾಡಿಸಿದ್ದಾರೆ ರಥೋತ್ಸವನ್ನು ಅನ್ನದಾನೇಶ್ವರ ಶಾಖಾ ಮಠದ ಕೂಕನೂರಿನ ಮಹಾದೇವ ದೇವರು.ಯಲಬುರ್ಗಾ ಶ್ರೀಧರಮುರಡಿ ಮಠದ ಬಸವ ಲಿಂಗೇಶ್ವರ ಶಿವಚಾರ್ಯ ಮಹಾಸ್ವಾಮಿಗಳು. ಬೆದವಟ್ಟಿಯ ಸಂಗಮೇಶ್ವರ ಶಿವಚಾರ್ಯ ಮಹಾಸ್ವಾಮಿ ಮಕ್ಕಳ್ಳಿಯ ಶಿವಾನಂದ ಮಠದ ಶಿವಾನಂದ ಮಹಾ ಸ್ವಾಮಿಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಮುಂಜಾನೆ ಗ್ರಾಮದಿಂದ ದೇವಸ್ಥಾನದವರಗೆ ಭಕ್ತರು ಜವಳ,ದೀಡ್ ನಮಸ್ಕಾರ ಹರಕೆಯನ್ನ ತೀರಿಸಿದರು
ಮಂಗಳವಾರ ಸಂಜೆ ಗೊಲ್ಲ ಸಮುದಾಯದಿಂದ ಹಾಲು ಓಕಳಿ ಆಟ ಹಾಡಲಾಯಿತು.
ಬುಧವಾರ ಬೆಳಿಗ್ಗೆ ನೂತನ ಮಹಾ ರಥೋತ್ಸವಕ್ಕೆ ಬಂಡಿ ಗ್ರಾಮದ ಶೇಖರಯ್ಯ ಹಿರೇಮಠ ಶಾಸ್ತ್ರಿ ರಥಾಂಗ ಹೋಮ ನೆರವೇರಿಸಲಾಯಿತು.ಈ
ರಥೋತ್ಸವಕ್ಕೆ ಗೆದಗೇರಿ ಗ್ರಾಮಸ್ಥರಿಂದ ತೇರಿನ ಕಳಸ ಮಕ್ಕಳ್ಳಿ,ಹಾಗೂ ಸಾಲಭಾವಿ ಗ್ರಾಮಸ್ಥರಿಂದ ರುದ್ರಾಕ್ಷಿ ಹಾರ ಸೇವೆ.ನರಸಾಪೂರ ಗ್ರಾಮಸ್ಥರಿಂದ ನಂದಿಕೋಲು.ಬಸರಿಹಾಳ ಗ್ರಾಮದಿಂದ ಮಹಾ ರಥೋತ್ಸವದ ಹಗ್ಗ ತರಲಾಯಿತು.
ತಲ್ಲೂರು ತಾಂಡಾ,ಮುರಡಿ ತಾಂಡಾ,ಗೆದಗೇರಿ ತಾಂಡಾ ಚಿಕ್ಕಮ್ಯಾಗೇರಿ ತಾಂಡಾದವರಿಂದ ತೇರಿಗೆ ಹೂವಿನ ಹಾರ ಅರ್ಪಿಸಿದರು.
ಎರಡೂ ದಿನಗಳಿಂದ ಗ್ರಾಮಸ್ಥರಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು ಅದರಲ್ಲೂ ಈ ವರ್ಷ ಗ್ರಾಮದ ಮಾರುತೇಶ್ವರ ದೇವರ ಜಾತ್ರೆಗೆ ನೂತನ ರಥ ನಿರ್ಮಾಣ ಗೊಂಡಿರುವ ಹಿನ್ನಲೆಯಲ್ಲಿ ಜನರು ನೂತನ ರಥೋತ್ಸವ ಕಣ್ಣುಂಬಿಕೊಳ್ಳಲು,ವಿವಿಧ ಗ್ರಾಮಗಳಾದ ಸಾಲಭಾವಿ ,
ಮುರಡಿ,ಹುಲೇಗುಡ್ಡ,ಮಕ್ಕಳ್ಳಿ,ನರಸಾಪೂರ,ಮಂಡಲಮರಿ,ಚಿಕ್ಕಮ್ಯಾಗೇರಿ,ಗೆದಗೇರಿ,ವಜ್ರಬಂಡಿ,ಜರಕುಂಟಿ,ಮದ್ಲೂರು,ತಲ್ಲೂರು,ಗಾಣದಾಳ,ಚಿಕ್ಕವಂಕಲಕುಂಟಾ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ಕಲಾ ತಂಡಗಳಾದ ಗೊಂಬೆಗಳ ಕುಣಿತ,ಡೊಳ್ಳು ಕುಣಿತ,ನಂದಿ ಕೋಲು ಕುಣಿತ,ಭಾಜಾ ಭಜಂತ್ರಿ ಮೇಳಗಳು ಭಾಗವಹಿದ್ದರು.ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು. ನಂತರದಲ್ಲಿ ರಥೋತ್ಸವ ಸಹಾಯ ಸಹಕಾರ ನೀಡಿದ ಮಹಾನೀಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ