ವಿಜಯಪುರ-ಬಬಲೇಶ್ವರ ಮತಕ್ಷೇತ್ರದ ಮಮದಾಪುರದಲ್ಲಿ ಇಂದು ನಡೆದ ಜಿಪಂ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ,ವಿಜಯಪುರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದು ಹೇಳಿದ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾನ್ಯ ಶ್ರೀ ರಾಜು ಆಲಗೂರ ಸಾಹೇಬರು ಈ ಹಿಂದಿನವರು ಏನೂ ಕೆಲಸ ಮಾಡಿಲ್ಲ ಎನ್ನುವುದು ನಿಮಗೆಲ್ಲ ಗೊತ್ತಿದೆ.ಬಿಜೆಪಿಯ ಭ್ರಮೆ ಮತ್ತು ಕಾಂಗ್ರೆಸ್‌ನ ವಾಸ್ತವದ ನೆಲೆಯಲ್ಲಿ ಮತ ನೀಡಿ ಉಪಕರಿಸಿ ಎಂದು ಕೋರಿದರು.
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರು ಸಭೆಯ ನೇತೃತ್ವ ವಹಿಸಿ ಮಾತನಾಡಿ, ಮೋದಿಯವರ ಜನ ವಿರೋಧಿ ನೀತಿಯಿಂದ ದೇಶದ ಸಾಮಾನ್ಯರು ಬಸವಳಿದಿದ್ದಾರೆ.ಈ ಸಲ ಬದಲಾವಣೆ ತನ್ನಿ ನೀರು ನೀಡಿದಂತೆ ಉಳಿದ ಕೆಲಸಗಳೂ ಸರಾಗವಾಗಿ ನಮ್ಮಿಂದ ನಿಮಗೆ ಸಿಗಲಿವೆ ಎಂದು ಭರವಸೆ ನೀಡಿದರು.
ಮುಖಂಡರಾದ ಎಂ.ಕೆ. ಕುಲಕರ್ಣಿ,ಆನಂದಕುಮಾರ ದೇಸಾಯಿ,ಸಂಗಮೇಶ ಬಬಲೇಶ್ವರ,ಕೃಷ್ಣಪ್ರಸಾದ ಕುಲಕರ್ಣಿ,ತಮ್ಮಣ್ಣಗೌಡ,ಮೌಲಾಸಾಬ ಜಾಗೀದಾರ, ಬಸವರಾಜ ದೇಸಾಯಿ,ರಫೀಕ ಖಾನೆ ಮತ್ತು ಅನೇಕರಿದ್ದರು.
