ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರು ಗ್ರಾಮದ ಅಭಯ ಪಂಡಿತ ಇವರು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ನಾಗಾ ಮಿಸೈಲ ತುಕಡಿಯ ಪಥಸಂಚಲನವನ್ನು ಮುನ್ನಡೆಸುವುದರೊಂದಿಗೆ ಮುಂಡಗೋಡಿ ತಾಲೂಕಿಗೆ ಕೀರ್ತಿ ತಂದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಬೇಕೆಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಯುವಕ ಅಭಯ್ ಪಂಡಿತರು ಯಶಸ್ವಿಯಾಗಿದ್ದು,ಯುವಕರಲ್ಲಿ ಸಾಧಿಸುವ ಛಲ ಇದ್ದರೆ ಅತ್ಯುನ್ನತ ಹುದ್ದೆಯನ್ನು ಪಡೆಯಬಹುದು ಎಂದು ಸಾಧಿಸಿ,ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ ಎಂದು ದೇಶಪಾಂಡೆ ಅವರು ಅಭಿಪ್ರಾಯ ಪಟ್ಟರು.
ಶ್ರೀ ಅಭಯ ಪಂಡಿತ ಇವರು ಹಳಿಯಾಳದ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡಿರುವುದು ವಿಶೇಷ.ಇವರನ್ನು ಅಭಿನಂದಿಸಿ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.