ರವಿವಾರ ನಡೆದ ಐಪಿಎಲ್ ಮಾದರಿಯ 7 ತಂಡಗಳ ಸಂಶಿ ಜಾತ್ರಾ ಪ್ರೀಮಿಯರ್ ಲೀಗ್(SJPL) ಸೀಸನ್ ೨ ರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಶ್ರೀ ಮೈಲಾರಲಿಂಗೇಶ್ವರ ಸಿಸಿ ತಂಡ ಬಲಿಷ್ಠ ಭಗತ್ ಸಿಂಗ್ ತಂಡವನ್ನು ಮಣಿಸಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ವಿಜೇತ ತಂಡಕ್ಕೆ ಇಂದು ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ ಪಂ ಅಧ್ಯಕ್ಷ ಶ್ರೀ ರಾಜು ಪುಟ್ಟಣವರ ವಹಿಸಿ ಮಾತನಾಡಿ ವಿಜೇತ ತಂಡಕ್ಕೆ ಶುಭಹಾರೈಸಿದರು.ಶ್ರೀ ಮೈಲಾರಲಿಂಗೇಶ್ವರ ತಂಡದಲ್ಲಿ ಮಂಜು ಗೊಂದಿ,ಸಂಜು ಗೋಮಪ್ಪನವರ,ಈರಪ್ಪ ರಾಟಿ ಮಲ್ಲು ಕಲ್ಲೂರ,ರಾಜು ಕೋಳಿವಾಡ ಹಾಗೂ ಸಹ ಆಟಗಾರರು ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.ತಂಡದ ಮಾಲೀಕರು ನಾಗರಾಜ ಕರೆಣ್ಣವರ ಆದರೆ ತಂಡದ ಮಾರ್ಗದರ್ಶಕರಾಗಿ ಶ್ರೀ ಮಂಜುನಾಥ ಹಾದಿಮನಿ ಕರವೇ ಅಧ್ಯಕ್ಷರು ಸಂಶಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ವರದಿ-ಸದಾಶಿವ ಭೀ ಮುಡೆಮ್ಮನವರ



















