ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ ಕಾರ್ಯಕ್ರಮವು ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಸ್ಥಳ-ಶ್ರೀ ಕೋರಿಸಿದ್ದೇಶ್ವರ ಮಠದ ಆವರಣದಲ್ಲಿ ನೇತ್ರದಾನ ಚಿಕಿತ್ಸೆ ಶಿಬಿರ ಹಾಗೂ ಬೆನ್ನು ನೋವು,ಕುತ್ತಿಗೆ ನೋವು,ಮೊಣಕಾಲು ನೋವು
ದೇಹದ ಭಾಗದ ಯಾವುದೇ ನೋವುಗಳಿಗೆ ಯಂತ್ರದ ಮುಖಾಂತರ ಚಿಕಿತ್ಸೆಯನ್ನು ನೀಡಲಾಗುವುದು ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠ ಸುಕ್ಷೇತ್ರ ನಾಲವಾರ ಪೂಜ್ಯ ಶ್ರೀಗಳ ಜನ್ಮದಾತೆ ಶ್ರೀ ಮಠದ ಅನ್ನಪೂರ್ಣೆ ಮಾತೋಶ್ರೀ ಲಿಂ.ಗೌರಮ್ಮ ತಾಯಿ (ಆಯಿ) ಯವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 16-04-2024 ರಂದು ಮಂಗಳವಾರ ಮಧ್ಯಾಹ್ನ-11 ಗಂಟೆಗೆ ಶ್ರೀ ಮಠದ ಆವರಣದಲ್ಲಿ ನಡೆಯುತ್ತದೆ ಹಾಗೆಯೇ
ಶ್ರೀ ಷ.ಬ್ರ.ಪರಮ ಪೂಜ್ಯ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮತ್ತು ಶ್ರೀ ಡಾ ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಾರಕೂಡ ಶ್ರೀಗಳು ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡುವರು ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಉಚಿತ ಆರೋಗ್ಯ ಶಿಭಿರ ಚಿಕಿತ್ಸೆ ಯನ್ನು ಸದುಪಯೋಗ ತೆಗೆದುಕೊಳ್ಳಿ ಸರ್ವರಿಗೊ ಹಾರ್ಧಿಕ ಸ್ವಾಗತ ಎಂದು ಶ್ರೀಮಠದ ಸದ್ಭಕ್ತರಾದ ಸೋಮಶೇಖರ ಎಸ್ ಲಾಡ್ಲಾಪೂರ ನಾಲವಾರ ಇವರು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.