ಕಲಬುರಗಿ:ಪುರಸಭೆ ಕಾರ್ಯಾಲಯದಲ್ಲಿ ವಿಶ್ವ ರತ್ನ ಮಹಾ ಮಾನವತಾವಾದಿ ದೀನದಲಿತರ ಆಶಾಕಿರಣ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಮಾಂಗ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ,ದೇಶದ ಮೊದಲ ಕಾನೂನು ಸಚಿವರು ದೇಶ ಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಪ್ರತಿ ವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ ಭಾರತದ ಕಾನೂನು ಸುವ್ಯವಸ್ಥೆ ಅಸ್ಪೃಶ್ಯತೆ ನಿವಾರಣೆ ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಭಿಯಂತರರಾದ ಸುನೀಲ ಕಂದಾಯ ಅಧಿಕಾರಿ ಶರಣಪ್ಪ ಲೋಹಿತ್ ಕಟ್ಟಿಮನಿ ವೆಂಕಟೇಶ ಕುಮಾರ ಶರಣು ರವಿಶಂಕರ, ಮರೆಪ್ಪ ರಾಜಕುಮಾರ ಭೀಮರಾಯ ಕ್ರಾಂತಿದೇವಿ ಸೇರಿದಂತೆ ಇತರರು ಇದ್ದರು.
ವರದಿ-ಮೊಹಮ್ಮದ್ ಅಲಿ