ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ
ಕಲಕೇರಿ ಹಾಗೂ ಹುಣಶ್ಯಾಳ ಮಹಾ ಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಲೋಕಸಭೆ ಚುನಾವಣೆ ಪ್ರಚಾರದ ಕಾರ್ಯಕ್ರಮ ಜರುಗಿತು.ಧರ್ಮ ಮತ್ತು ಅಧರ್ಮದ ನಡುವೆ ಯುದ್ದ ನಡೆದಿದೆ ಬಂಧುಗಳೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವುದರಿಂದ ನಾವು ದೇವರ ಹಿಪ್ಪರಗಿ ಮತಕ್ಷೇತ್ರದಿಂದ 50 ಸಾವಿರ ಮತಗಳ ಲೀಡ್ ಕೋಡುವುದರ ಮೂಲಕ ರಮೇಶ್ ಜಿಗಜಿಣಗಿ ಅವ್ರಿಗೆ ಓಟ್ ಹಾಕಿ ಮತ್ತೊಮ್ಮೆ ಸನ್ಮಾನ ನರೇಂದ್ರ ಮೋದಿ ಅವ್ರನ್ನ ಪ್ರಧಾನ ಮಂತ್ರಿಯಾಗಿ ಮಾಡೋಣ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಹೇಳಿದರು.ಇದು ನಡಿತಕ್ಕಂತದ್ದು ಹಿಂದುತ್ವದ ನಮ್ಮ ದೇಶದ ಉಳಿಗಾಲದ ಮತ್ತು ಸನಾತನ ಧರ್ಮ ರಕ್ಷಣೆಯ ಚುನಾವಣೆ ಆಗಿದೆ,ಆದಕಾರಣ ನೀವು ಬಿಜೆಪಿ ಓಟ್ ಹಾಕಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡೊಣ ಎಂದು ಬಸನಗೌಡ ಪಾಟೀಲ ನಾಗರಹಾಳ ಹುಲಿ ಹೇಳಿದರು.ಒಬ್ಬ ರೈಲ್ವೆ ಟ್ರ್ಯಾಕ್ ನಲ್ಲಿ ಚಹಾ ಮಾರುವ ವ್ಯಕ್ತಿ ಇಂದು ಭಾರತ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಗೆ 10 ವರ್ಷದ ಅವಧಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡಿದ್ರು 60 ವರ್ಷ ಆಳಿದ ಕಾಂಗ್ರೆಸ್ಸಿಗರಿಗೆ ರಾಮ್ ಮಂದಿರ ನಿರ್ಮಾಣ ಮಾಡಲಿಕ್ಕೆ ಆಗಲಿಲ್ಲ ಎಂದು ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಹೇಳಿದರು.
ಈ ಸಂದರ್ಭದಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಮತಯಾಚನೆ ಮಾಡಿದರು. ಬಿಜೆಪಿ ಮುಖಂಡರು ಆದ ಶ್ರೀ ಸಿದ್ದು ಬುಳ್ಳಾ,ಅರುಣ ಶಹಾಪುರ,ಪ್ರಭುಗೌಡ ಅಸ್ಕಿ,ಶ್ರೀಮತಿ ಶಿಲ್ಪಾ ಕುದರಗುಂಡ,ರಮೇಶ್ ಮಸಬಿನಾಳ,ಸೋಮಶೇಖರ್ ಸಜ್ಜನ,ಹಣಮಂತ ನಿರಾಣಿ,ಆರ್ ಎಸ್ ಪಾಟೀಲ್ ಕೂಚಬಾಳ,ಸಂಗಾರೇಡ್ಡಿ ದೇಸಾಯಿ,ಶರಣಪ್ಪ ಮೋಪಗಾರ,ಅಪ್ಪು ದೇಸಾಯಿ,ಕಿರಣ್ ಕುಮಾರ್ ದೇಸಾಯಿ,ರಾಜು ದೇಸಾಯಿ,ಶರಣು ಕೌದಿ,ಸುಧಾಕರ ಅಡಕಿ, ಪ್ರಕಾಶ್ ಯರನಾಳ, ಅಶೋಕ್ ಭೋವಿ, ಅಜೀಜ್ ಮುಲ್ಲಾ, ವಿನೋದ್ ವಡಗೇರಿ ವಿಶ್ವನಾಥ್ ಸಬರದ ಸದ್ದಾಂ ಮುಕ್ಕುಬಾಯಿ ಹಾಗೂ ಇನ್ನೂ ಮುಂತಾದ ಗ್ರಾಮದ ಗುರು ಹಿರಿಯರು,ಬಿಜೆಪಿ ಕಾರ್ಯಕರ್ತರು ಮತ್ತಿತರರು ಇದ್ದರು.
ವರದಿ:ಪುಂಡಲೀಕ ರಾಠೋಡ