ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಲ ಹೊರುವ ಪದ್ದತಿಗೆ ಮುನ್ನುಡಿ ಹಾಡಿದ ಹನೂರು ಪಟ್ಟಣ ಪಂಚಾಯ್ತಿ..!

ಪೌರ ಕಾರ್ಮಿಕರಿಂದಲೇ ಮಲ ಹೊರಿಸಿದ ಪ.ಪಂ.ಅಧಿಕಾರಿ ವಿರುದ್ಧ ಡಿ ಎಸ್ ಎಸ್ ಸಂಘಟನೆಯಿಂದ ವಿರೋಧ

ಹನೂರು:ಮಲ ಹೊರುವ ಪದ್ದತಿ ವಿರುದ್ದ ಅರಿವು ಮೂಡಿಸಿ ಕ್ರಮಕ್ಕೆ ಮುಂದಾಗ ಬೇಕಾದ ಪಟ್ಟಣ ಪಂಚಾಯ್ತಿ ಅಧಿಕಾರಿಗಳೇ ಪೌರಕಾರ್ಮಿಕರಿಂದ ಸಾರ್ವತ್ರಿಕವಾಗಿ ಮಲ ಹೊರಿಸುವ ಮೂಲಕ ಕಾರ್ಮಿಕರನ್ನು ಅಪಮಾನಗೊಳಿಸಿ ಅಮಾನವೀಯ ಕೃತ್ಯ ಎಸಗಿರುವ ಅಮಾನುಷ ಘಟನೆ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿದೆ.

ಪ್ರಕರಣದ ವಿವರ :
ಪಟ್ಟಣ ಪಂಚಾಯ್ತಿ ಕಚೇರಿಯ ಕೆಳಗಡೆಯೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬೃಹತ್ ಗುಂಡಿಯಲ್ಲಿ ತುಂಬಿದ ಮಲವನ್ನು ಗುರುವಾರ ಮುಂಜಾನೆ ಅವೈಜ್ಞಾನಿಕವಾಗಿ ಪಟ್ಟಣ ಪಂಚಾಯ್ತಿ ಜೆಸಿಬಿ ಯಂತ್ರದಿಂದ ಪಟ್ಟಣದಲ್ಲಿನ‌ ಕಸ ಸಾಗಿಸುವ ಟ್ರಾಕ್ಟರ್ ಗೆ ತುಂಬಿ ಹಲವು ಭಾರಿ ಸಾಗಿಸಲಾಗುತ್ತಿದ್ದಾಗ ಬಹುತೇಕ ಪಾಲು ಮಲ ಪಟ್ಟಣ ಪಂಚಾಯ್ತಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳ ಮುಂದೆ ಹಾಗೂ ರಸ್ತೆಯುದ್ದಕ್ಕೂ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದು ಬಸ್ ಗಾಗಿ ನಿಂತ ಪ್ರಯಾಣಿಕರು,ಹಾದಿ ಹೋಕರು, ಅಂಗಡಿ ಮಾಲೀಕರುಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

ಇದರಿಂದ ವಿಚಲಿತರಾದ ಪಟ್ಟಣ ಪಂಚಾಯ್ತಿ ಅಧಿಕಾರಿ ಆರೋಗ್ಯ ನಿರೀಕ್ಷಕರವರುಗಳು ಪಟ್ಟಣ ಪಂಚಾಯ್ತಿಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಂದಲೇ ರಸ್ತೆಯ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಮಲವನ್ನು ಸಾರ್ವಜನಿಕರ ಸಮ್ಮುಖದ ಲ್ಲಿಯೇ ಮಮುಟಿಯಿಂದ ಪ್ಲಾಸ್ಟಿಕ್ ಬುಟ್ಟಿಗೆ ತುಂಬಿ ತಲೆ ಮೇಲೆ ಹೊತ್ತು ಪಟ್ಟಣದ ಕಸ ಸಾಗಿಸುವ ಟೆಂಪೋದಲ್ಲಿ ತುಂಬಿ ಸಾಗಿಸುವಂತೆ ಮಾಡುವ ಮೂಲಕ ಪೌರ ಕಾರ್ಮಿಕರನ್ನು ಸಾರ್ವತ್ರಿಕವಾಗಿ ಅಪಮಾನಗೊ ಳಿಸುವುದರ ಜತೆಗೆ ಅಮಾನವೀಯತೆ ಮೆರೆದಿದ್ದಾರೆ.

ಈ ಅಮಾನವೀಯ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಖಾಸಗಿ ವ್ಯಕ್ತಿಗಳು ಸೆರೆ‌ಹಿಡಿದು ಮಾಧ್ಯಮಗಳವರಿಗೆ ನೀಡಿದ್ದಾರೆ.ಅಲ್ಲದೆ ಸದರಿ ಘಟನೆಯ ದೃಶ್ಯಾವಳಿಗಳು ಪಟ್ಟಣ ಪಂಚಾಯ್ತಿ ಮುಖ್ಯ ದ್ವಾರದಲ್ಲೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಪಟ್ಟಣ ಪಂಚಾಯ್ತಿಯಲ್ಲಿ ಮಲ ಸಾಗಿಸಲೆಂದೇ ಸೈಕಿಂಗ್ ಯಂತ್ರವಿದೆಯಾದರೂ ಅದನ್ನು‌ ಬಳಸದೆ ಪಂಚಾಯ್ತಿಯ ಜೆಸಿಬಿ‌ ಹಾಗೂ ಕಸ ಸಾಗಣೆ ಟ್ರಾಕ್ಟರ್ ಮತ್ತು ಟೆಂಪೋವನ್ನು‌ ಬಳಸಿಕೊಳ್ಳುವುದರ ಜತೆಗೆ ಪೌರಕಾರ್ಮಿಕರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ.

ಸಾಲದೆಂಬಂತೆ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿಯಿಂದ ತೆರೆದ ವಾಹನಗಳಲ್ಲಿ ತುಂಬಿದಂತಹ ಬಹುಪಾಲು ದ್ರವ ರೂಪದ ಮಲವನ್ನು‌ ಸಾರ್ವತ್ರಿಕ ಪ್ರದೇಶದ ಹಾದಿ ಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಿಕೊಂಡು ಹೋಗುವುದರ ಜತೆಗೆ ಬಯಲು ಪ್ರದೇಶದಲ್ಲೇ ಸುರಿಯುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡದೆ ಅನೈರ್ಮಲ್ಯಕ್ಕೆ ಮೂಲ ಕಾರಣರಾಗುವ ಮೂಲಕ ಸಾಂಕ್ರಾಮಿಕ ರೋಗ ರುಜಿನಗಳಿಗೆ ನಾಂದಿ ಹಾಡಿ ನಾಗರೀಕರ ಜೀವದ ಜತೆ ಚೆಲ್ಲಾಟ ಆಡಿದ್ದಾರೆ.

ಕಾರ್ಮಿಕರ ದಿನಾಚರಣೆ ಯಂದು ಪೌರಕಾರ್ಮಿಕರನ್ನು ಸನ್ಮಾನಿಸುವಂತಹ‌ ಬೂಟಾಟಿಕೆ ತೋರುವ ಪಂಚಾಯ್ತಿ ಅಧಿಕಾರಿಗಳು ವಾಸ್ತವದಲ್ಲಿ ಅವರಿಂದಲೇ ಮಲ ಹೊರಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಂಡಿರುವುದರ ವಿರುದ್ದ ತಪ್ಪಿತಸ್ತರ ವಿರುದ್ದ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿ ಮುಂದೆಂದೂ ಇಂತಹ ಮಲ ಹೊರುವ ಪದ್ದತಿ ಮರುಕಳಿಸದಂತೆ ಕಠಿಣ ಕಾನೂನು ಕ್ರಮ‌ಕೈಗೊಳ್ಳುವಂತೆ ಪ್ರಬುದ್ದ ನಾಗರೀಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಮಲದ ಗುಂಡಿಯಲ್ಲಿದ್ದುದು‌ ಹೂಳಂತೆ..!? ಮುಖ್ಯಾಧಿಕಾರಿ ಶ್ರೀಧರ್ ಉವಾಚ..!

ಪೌರ ಕಾರ್ಮಿಕರಿಂದ ಮಲ ಹೊರಿಸಿದ ಪ್ರಕರಣದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿ ವಾಟಾಪ್ಸ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದಂತೆ ದಿಢೀರ್ ಜ್ಞಾನೋದಯವಾದವರಂತೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲೆತ್ನಿಸಿದ ಪ.ಪಂ.ಮುಖ್ಯಾಧಿಕಾರಿ ಶ್ರೀಧರ್ ರವರು ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ದಿಢೀರನೆ ಜಿಲ್ಲಾಧಿಕಾರಿಗಳಿಗೆ ತಪ್ಪೇ ನಡೆದಿಲ್ಲವೆಂಬಂತೆ ತೋರಿಸಿಕೊಳ್ಳಲು ಹೋಗಿ ತೋಚಿದ್ದೇ ಗೀಚಿದ್ದು ಎಂಬಂತೆ ಊಹಾ ಪೋಹದ ಸ್ವಯಂಕೃತ ಸಮಜಾಯಿಷಿ ನೀಡಲು ಹೋಗಿ ಮತ್ತೊಮ್ಮೆ ಸಿಕ್ಕಿಬಿದ್ದು ಅಪಹಾಸ್ಯಕ್ಕೀಡಾಗಿದ್ದಾರೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಎಂಬಂತೆ ಅವರ ಸಮಜಾಯಿಷಿಯಲ್ಲಿ ಹೇಳುವಂತೆ ಮಾನವರು ಬಳಸಿರುವ ಶೌಚಾಲಯದ ಗುಂಡಿಯಲ್ಲಿ ಮಾನವರು ವಿಸರ್ಜಿಸಿರುವ ಮಲವಿರುತ್ತದೆಯೋ ಹೊರತು ಹೂಳು ತುಂಬಿಕೊಳ್ಳಲು ಅದೇನು ಕೆರೆಯೇ..?ಬತ್ತದ ಗದ್ದೆಯೆ..? ಕೊಳಚೆ ನೀರು ಹರಿಯುವ ಚರಂಡಿಯೇ..? ಅದನ್ನು‌ ಜೆಸಿಬಿಯಿಂದ ಎತ್ತಿ ಪಟ್ಟಣದ ಕಸ ಸಾಗಣೆ ವಾಹನದಲ್ಲಿ ತುಂಬಿ ಸಾಗಿಸಲು ಅನುಮತಿ ಇದೆಯೆ..? ಮಲ ಮಿಶ್ರಿತದಿಂದ ಬರುವ ನೀರು ಮಲಿನ ನೀರೆ ಹೊರತು ಯಾವ ರೀತಿ ಕೊಳಚೆ ನೀರಾಗುತ್ತದೆ..? ಅದರ ಮೇಲೆ ಬ್ಲೀಚಿಂಗ್ ಪೌಡರ್ ಹಾಕಿ ಒಣಗಿದ ನಂತರ ಬ್ಲೀಚಿಂಗ್ ಪೌಡರ್ ಮತ್ತು ಧೂಳು ಮಿಶ್ರಿತ ಮಣ್ಣನ್ನು ಪೌರ ಕಾರ್ಮಿಕರುಗಳಿಂದ ಗುಡಿಸಿ ಗುದ್ದಲಿಯಿಂದ ಬಾಂಡಲಿಗೆ ತುಂಬಿ ಕಸ ಸಾಗಣೆ ವಾಹನಕ್ಕೆ ಹಾಕಿರುತ್ತಾರೆ ಎಂಬುದಾದರೆ ಗುದ್ದಲಿಯಿಂದ ತುಂಬಲು ಸಾಧ್ಯವೆ..?
ನೀವು ಯಾವುದೇ ಸುರಕ್ಷತೆ ಇಲ್ಲದೆ ಪೌರಕಾರ್ಮಿಕರುಗಳಿಂದ ತುಂಬಿಸಿ ತಲೆ ಮೇಲೆ ಹೊರಿಸಿರುವುದು‌ ಮಾನವನ ಮಲವೇ ಹೊರತು ಮಣ್ಣಲ್ಲ..? ಕೊಳಚೆ ನೀರಲ್ಲ..?

ಒಬ್ಬ ಜವಾಬ್ದಾರಿಯುತ ಮುಖ್ಯಾಧಿಕಾರಿಯಾಗಿರು‌ವ ಇವರು ಮಾಡಿರುವ ಇಂತಹ ನೀಚ ಘೋರ ಅಕ್ಷಮ್ಯ ಅಪರಾದಕ್ಕೆ ಜಿಲ್ಲಾಡಳಿತ ಮೀನಾ-ಮೇಷ ಎಣಿಸದೆ ಕೂಡಲೇ ಕೂಲಂಕುಷ ವಿಚಾರಣೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಪಟ್ಟಣದ ನಾಗರೀಕರ ಒಕ್ಕೊರಲ ಆಗ್ರಹವಾಗಿದೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಾಮರಾಜನಗರ ವಿಭಾಗೀಯ ಸಂಚಾಲಕರ ಜೊತೆ ತಾಲೂಕು ಸಂಚಾಲಕರು ಹನೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಇನ್ನಿತರ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ