ದಾನ ಧರ್ಮವು ಮಾಡುವುದು ಶಾಶ್ವತ
ಕರುಣೆ ಮಮಕಾರ ಇರಲಿ ಇವತ್ತು
ಮಾಡಬೇಡ ದುರಹಂಕಾರ ಯಾವತ್ತು
ಕಷ್ಟ ಪಟ್ಟು ಇರು ಹೆಚ್ಚು ಹೊತ್ತು//
ಇಂದಲ್ಲ ನಾಳೆ ಸಿಗುವುದು ನೆಮ್ಮದಿ
ಬರುತ್ತದೆ ಎಂದು ತಿಳಿದು ಭಾವಿಸಿದೆ
ಕ್ಷಣ ಕಾಲದ ನಂತರ ಬರುವುದೇ
ಖುಷಿ ಎನಿಸುತ್ತದೆ ಜೀವನದಲ್ಲಿ//
ಶಿಕ್ಷಣ ವ್ಯವಸ್ಥೆಯಲ್ಲಿ ಶಾಶ್ವತವಾದರೆ
ದುಡ್ಡು ದುಬಾರಿ ದುನಿಯಾ ಎಂದರೆ
ಖಚಿತವಾಗಿ ಕಾಲಚಕ್ರ ಅರಿತರೆ
ಬದಲಾಗುವುದು ಸಮಸ್ಯೆವು ತಿಳಿಸಿದ್ದಾರೆ//
ಬಾವಿಯಲ್ಲಿನ ನೀರು ಮಲಿನ ವಾದರೆ
ಭಾವನಾತ್ಮಕ ಬದುಕು ಕಂಡರು ದಾಸರು
ವೇದಗಳು ಸಾರಿ ಶಾಶ್ವತ ಉಳಿದವರು
ಮಹಾತ್ಮಾರ ಮರ್ಮದಾ ಮಾತು ಶಾಶ್ವತ//
-ಮಹಾಂತೇಶ ಖೈನೂರ