ಕಲಬುರಗಿ:ಹಿಂದುಳಿದ ಹಾಗೂ ಬಡ ಪಂಗಡಗಳ ಜನತೆಯ ಏಳಿಗೆಗೆ ದುಡಿದವರಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಪ್ರಮುಖರು ಎಂದು ಸೂಗೂರಿನ ಶ್ರೀ ಡಾ.ಚೆನ್ನರುದ್ರಮುನಿ ಶಿವಚಾರ್ಯರು ಹೇಳಿದರು.
ಸೋಮವಾರ ಕಾಳಗಿ ತಾಲೂಕಿನ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಂ ಅವರ 117ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಯಶಸ್ವಿ ಹಸಿರು ಕ್ರಾಂತಿಯಲ್ಲೂ ಜಗಜೀವನ ರಾಂ ಅವರು ಮಾಜಿ ಕೇಂದ್ರ ಸಚಿವ ಸಿ.ಸುಬ್ರಹ್ಮಣ್ಯಂ ಅವರೊಂದಿಗೆ ಕೂಡಿ ಮಹತ್ವದ ಸೇವೆ ಸಲ್ಲಿಸಿದ್ದರು ಎಂದು ಶಿವಚಾರ್ಯರು ಅಭಿಪ್ರಾಯಪಟ್ಟರು.ಡಾ.ಬಾಬು ಜಗಜೀವನರಾಂ ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಿ, ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂದು ಅವರು ಹೇಳಿದರು.
ಡಾ.ಬಾಬು ಜಗಜೀವನರಾಮ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಹಸಿರು ಕ್ರಾಂತಿ ಮಾಡಿ ಆರ್ಥಿಕವಾಗಿ ಬೆಳೆಯಲಿಕ್ಕೆ ಕಾರಣಿಕರ್ತರಾಗಿದರು.ಹಿಂದೂಳಿದ ವರ್ಗಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಸಾಧಿಸಿದ್ದಾರೆ.ಅವರ ಯೋಜನೆ ಮತ್ತು ವಿಚಾರ ಫಲ ಹಿಂದೂಳಿದ ವರ್ಗಗಳು ಸ್ವತಂತ್ರ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.ಕೇವಲ ಒಂದೇ ಸಮಾಜದವರು ಸೇರಿ ಜಯಂತಿ ಆಚರಣೆ ಮಾಡದೆ, ಎಲ್ಲ ಸಮಾಜದವರು ಸೇರಿ ಆಚರಣೆ ಮಾಡಬೇಕು. ಅವರ ತತ್ವ ಸಿದ್ದಾಂತಗಳನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ,ಹಿರಿಯ ಸಾಹಿತಿಗಳಾದ ಆರ್.ಕೆ.ಹುಡಗಿ,ಶಾಸಕ ಅವಿನಾಶ ಜಾಧವ,ಪ್ರಮುಖರಾದ ಗೋಪಾಲರಾವ ಕಟ್ಟಿಮನಿ,ರಾಜೇಶ ಗುತ್ತೇದಾರ,ಚಿಂತನ ರಾಠೋಡ,ಶ್ಯಾಮ ನಾಟೀಕಾರ,ಮಂಜುಳಾ ಸಿಂಗೆ,ವಿಜಯಕುಮಾರ ಚೇಗಂಟಿ,ರವಿ ಸಿಂಗೆ,ರೇವಣಸಿದ್ದಪ್ಪ ಕಟ್ಟಿಮನಿ,ಹರೀಶ ಸಿಂಗೆ,ಶರಣು ರಾಜಾಪೂರ,ಮಹೇಶ ಭರತನೂರ, ರೇವಣಸಿದ್ದ ಕೊಡ್ಲಿ,ಸುಂದರ ಸಾಗರ,ಶಿವಕುಮಾರ ಕಮಕನೂರ,ರಮೇಶ ಕಿಟ್ಟದ,ಜಗನ್ನಾಥ ತೇಲಿ,ಬಾಬುರಾವ ಕೊರವಿ,ಮಲ್ಲಿಕಾರ್ಜುನ ಬೆಲೂರ,ಶರಣು ಸಾಲಿಮಠ,ಸಂತೋಷ ನರನಾಳ,ಶಾಮರಾವ ಪಾಟೀಲ, ಅವಿರೋಧ ಕಟ್ಟಿಮನಿ,ಆಕಾಶ ಕೊಳ್ಳೂರ, ವಿಜಯಕುಮಾರ,ರಮೇಶ ವಾಡೇಕರ,ರಾಜು ಕಟ್ಟಿಮನಿ,ಅನೀಲ ಡೊಂಗರಗಾಂವ, ಹಾಗೂ ಮಧುಕರ ಕಾಂಬಳೆ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.