ಉತ್ತರ ಕನ್ನಡ:ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಆಡಳಿತ ಮತ್ತು ತಾಲೂಕ ಪಂಚಾಯತ ಮುಂಡಗೋಡ, ಪಟ್ಟಣ ಪಂಚಾಯತ ಮುಂಡಗೋಡ, ತಾಲೂಕು ಸ್ವೀಪ್ ಸಮಿತಿ ಮುಂಡಗೋಡ ಮತ್ತು ಬೆಳಕು ಸ್ವಯಂ ಸೇವಕರ ಸಂಘ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಲೋಕಸಭಾ ಚುನಾವಣೆ-2024
ಮತದಾನ ಜಾಗೃತಿ ಅಂಗವಾಗಿ “ಸ್ವೀಪ್ ಕಪ್”
ತಾಲೂಕಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ತಾಲೂಕ ಕ್ರೀಡಾಂಗಣ ಮುಂಡಗೋಡದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಶಂಕರ್ ಗೌಡಿ, ಮತದಾನ ಜಾಗೃತಿಗಾಗಿ ವಿನೂತನ ಕಾರ್ಯಕ್ರಮ ಇದಾಗಿದ್ದು ಮೇ 07 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಜವಾಬ್ದಾರಿ ಮೆರೆಯಬೇಕು ಎಂದರು.
ತಾಲೂಕ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ಟಿ ವಾಯ್ ದಾಸನಕೊಪ್ಪ ಮಾತನಾಡಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನ ಆಗಬೇಕು ಆ ಕಾರಣಕ್ಕಾಗಿ ಮತದಾನ ಜಾಗೃತಿಗಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಎಂದರು
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶಂಕರ್ ಗೌಡಿ, ಪಟ್ಟಣ ಪಂಚಾಯ್ತಿ ಮುಂಡಗೋಡ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ.ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಟಿ ವಾಯ್ ದಾಸನಕೊಪ್ಪ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಇಲಾಖೆಯ ಪ್ರದೀಪ್ ಭಟ್,ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಹಜಾರೆ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಶ್ ಬಾಲಯ್ಯನವರ್ ಉಪಸ್ಥಿತರಿದ್ದರು.ಪ್ರಸನ್ನ ಸಿಂಗ್ ಹಜಾರೆ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಡೋರಿ ಯವರು ಸ್ವಾಗತ ಕೋರಿದರು.
ಇದೇವೇಳೆ ವಾಲಿಬಾಲ್ ಪಂದ್ಯಾವಳಿ ಯ ಫೈನಲ್ ಪಂದ್ಯದಲ್ಲಿ ಮುಂಡಗೋಡ ದ ಐ ಎಫ್ ಸಿ ತಂಡವನ್ನು ಅರಿಷಿನಗೆರಿ ತಂಡ ಸೋಲಿಸುವ ಮೂಲಕ ಮೊದಲ ಬಹುಮಾನ ಪಡೆದುಕೊಂಡಿತು.