ತಡಿಬಿಡಿ ಗ್ರಾಮದ 4 ನೆಯ ವಾರ್ಡಗೆ ತಾಲುಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಭೇಟಿ
ವಡಗೇರಾ:ಕರುನಾಡ ಕಂದ ವರದಿ ಫಲಶೃತಿ
ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು,ದುರ್ನಾತ ಬೀರುತ್ತಿದೆ.ಸೊಳ್ಳೆ, ನೊಣ,ಕ್ರಿಮಿಕೀಟಗಳ ಹಾವಳಿ ಹೆಚ್ಚಿದೆ.ಇದರ ನಡುವೆ ಜನರು ಓಡಾಡಬೇಕಾಗಿದೆ, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆಯಲ್ಲದೇ ಈ ರಸ್ತೆ ದಾಟಲು ಜನರು ಪರದಾಡುವ ಸ್ಥಿತಿ ಉಂಟಾಗಿದೆ, ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡಲೇ ಪರಿಹಾರ ಕಲ್ಪಿಸಿಕೊಡಬೇಕು,ಶೀಘ್ರ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸಂಗಮೇಶ ತಡಿಬಿಡಿ ಅಧ್ಯಕ್ಷರು,ರಾಜ್ಯ ರೈತ ಸಂಘ ಹಸಿರು ಸೇನೆ ಗ್ರಾಮ ಘಟಕ ತಡಿಬಿಡಿ ರವರು ಎಚ್ಚರಿಕೆ ನೀಡಿದ್ದಾರೆ.
ಎಂದು ಇಂದು ನಮ್ಮ ಪತ್ರಿಕೆಯ www.karunadakanda.com ಸುದ್ದಿಜಾಲತಾಣದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ-ಸಂಗಮೇಶ ತಡಿಬಿಡಿ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು ಅದನ್ನು ಗಮನಿಸಿದ ವಡಗೇರಾ ತಾಲುಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಸಂಗ್ವಾರರವರು ಇಂದು ತಡಿಬಿಡಿ ಗ್ರಾಮಕ್ಕೆ ಬೇಟಿ ನೀಡಿ ಕೂಡಲೇ ಸದರಿ ಕಾರ್ಯ ಮಾಡಲು ಸೂಚನೆ ನೀಡಿದರು.
ನಾಳೆಯಿಂದ ಸ್ವಚ್ಚತಾ ಕೆಲಸ ಆರಂಭವಾಗುತ್ತದೆ, ಜನರ ಧ್ವನಿಯಾಗಿ ಕೆಲಸಮಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದರು ಕರುನಾಡ ಕಂದ ವರದಿಗೆ ಸ್ಪಂದಿಸಿ ವಡಗೇರಾ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಸಂಗ್ವಾರರವರು ಮತ್ತು ಪಿಡಿಒ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳು ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿರುವುದಕ್ಕೆ 4 ನೆ ವಾರ್ಡಿನ ನಾಗರಿಕರು ಹಾಗೂ ಸಂಗಮೇಶ ತಡಿಬಿಡಿ ಅಧ್ಯಕ್ಷರು,ರಾಜ್ಯ ರೈತ ಸಂಘ ಹಸೀರು ಸೇನೆ ಗ್ರಾಮ ಘಟಕ ತಡಿಬಿಡಿರವರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ