ಮನದ ಇರುಳಲ್ಲಿ ಬೆರೆತಾ ಬೆಳದಿಂಗಳ ಚೆಲುವೆ ನೀನು
ಹಾಗಲಲ್ಲಿಯೇ ಬಿದ್ದಾ ಕನಸೊಂದರಲ್ಲಿ ಅತಿಯಾದ ಚೆಲುವಲ್ಲಿ ಸೆಳೆದು ವಾಸಂತಿ ನೀನು..
ಕಾಣದ ಒಲವನ್ನು ಹೊಳೆಯಾಗಿ ಹರಿಸುತ್ತಾ ಬಂದಾ ನನ್ನ ಪ್ರೇಮ ಗಂಗೆ ನೀನು
ಯಾವ ಕಲ್ಪನೆಯೂ ಇಲ್ಲದ ಜೀವಕೆ ಸಿಂಗಾರದ
ಸಿರಿಯೇ ಇಳಿದು ಬಂದು ರತಿಯೇ ನೀನು..
ಕಂಡ ಕನಸೊಂದರಲ್ಲಿ ಮಿತಿ ಮೀರಿ ಪ್ರೀತಿಸಿದ ನನ ಮೊದಲ ಪ್ರೇಯಸಿ ನೀನು
ಹೊಸದೊಂದು ಕಲ್ಪನೆಯಲ್ಲಿ ಹೊಸ ರಂಗನ್ನು ಚೆಲ್ಲಿದಾ ಸುರ ಸುಂದರಾಂಗಿ ನೀನು.. ಮಂದ ಹಾಸವ ಚೆಲ್ಲುತ್ತಾ ನೋಡಿದ ಕ್ಷಣದಲ್ಲಿ ಸೋಲುವಂತೆ ಮಾಡಿದ ಚೆಲ್ವಿ ನೀನು
ಕದ್ದು ಕದ್ದು ನೋಡಿದ ಪರಿಗೆ ಒಲವ ಸಂಭಾಷಣೆ ನೆಡೆಸಿ ಮನಸ್ಸುನೆ ಕೆಡಸಿದ ಮುದ್ದು ನೀನು..
ಶ್ರಾವಣದಲ್ಲಿ ಕಂಚೀ ಸೀರೆಯ ಹುಟ್ಟು ಕರುನಾಡ ಸಂಸ್ಕೃತೆಯಂತೆ ಹೊಳೆದ ಸಿರಿಯೇ ನೀನು
ಮುಂಜಾನೆಯ ಮಬ್ಬನು ಸರಿಸಿದಾಗ ಕಂಡಾ ಅತಿಲೋಕ ಸುಂದರಿಯೇ ನೀನು.
✍🏻ಪ್ರೀತಿ ರಾಜ್