ಮೈಸೂರು:ನಾಡಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಯರ ಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನರಸಿಂಹರಾಜಪುರದ ಬಸವಕೇಂದ್ರದ ಶ್ರೀ ಬಸವಯೋಗಿಪ್ರಭುಗಳು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಮಾನವೀಯತೆ ಇಲ್ಲದವರು ಮಾತ್ರ ಹಂತಕರಾಗುತ್ತಾರೆ.ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ
ನೇಹಾ ಹಿರೇಮಠ ಹತ್ಯೆ ಖಂಡನೀಯವಾದದ್ದು ಕೊಲೆ ಮಾಡಿದವನಿಗೆ ಉಗ್ರ ಶಿಕ್ಷೆಯಾಗಬೇಕು ಹಗಲಿನಲ್ಲೇ ಹತ್ಯೆಗಳು ನಡೀತಾ ಇದ್ದಾವೆ ಸರ್ಕಾರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ವಿದ್ಯಾರ್ಥಿಗಳು ಕಾಲೇಜ್ ಗೆ ಶಿಕ್ಷಣ ಕಲಿಯಲು ಹೋಗಬೇಕು ವಿನಃ ಲವ್ ಜಿಹಾದ್ ನಂತಹ ಕೃತ್ಯಕ್ಕೆ ಬಲಿಯಾಗಿ ಹೆತ್ತವರಿಗೆ ನೋವನ್ನು ಕೊಡಬಾರದು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
