ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಮತ್ತು ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪಾಪನಾಶ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.ಈಗಾಗಲೇ ಏ.15 ರಂದು ನಾಮಪತ್ರ ಸಲ್ಲಿಸಿರುವ ಖೂಬಾ ಅವರು ಗುರುವಾರ ರೋಡ್ ಶೋ ಮೂಲ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಲಾಯಿತು.ನಗರದ ಗಣೇಶ್ ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯು ಇಲ್ಲಿವರೆಗೆ ಅಭಿವೃದ್ಧಿ ಹೊಂದದೆ ಹಿಂದೂಳಿಯಲು ಖಂಡ್ರೆ ಕುಟುಂಬವೇ ಕಾರಣವಾಗಿದೆ.ಮೊನ್ನೆ ನಡೆದ ಕಾಂಗ್ರೆಸ್ಸಿನ ಸಮಾವೇಶದಲ್ಲಿ ಉಸ್ತುವಾರಿ ಸಚಿವರು ಲೋಕಸಭೆ ಚುನಾವಣೆ ಬಹಳ ಮಾತು ಅದು ಇದೆ ಎಂದು ಕಾಂಗ್ರೆಸ್ನವರಿಗೆ 75 ವರ್ಷಗಳ ನಂತರ ಬುದ್ದಿ ಬಂದಿದೆ ಈಗ ಅವರಿಗೆ ಮಹತ್ವ ಅರ್ಥ ಆಗ್ತಾ ಇದೆ,65 ವರ್ಷಗಳ ಕಾಲ ಅಧಿಕಾರ ಮಾಡಿದ್ರೂ ಮಹತ್ವ ತಿಳಿದಿರಲಿಲ್ಲ.ಲೋಕಸಭೆ ಚುನಾವಣೆ ಅಂದರೆ ಹಣ ಹೆಂಡ ಹಂಚಿ ಭಯಭೀತರನ್ನಾಗಿ ಮಾಡಿ ಅಧಿಕಾರಕ್ಕೆ ಬರುವುದು ಎಂದು ತಿಳಿದುಕೊಂಡಿದ್ದರು.ಕಳೆದ ಹತ್ತು ವರ್ಷದ ಕಾಲಾವಧಿಯ ಮಾನ್ಯ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿಯನ್ನು ಕಂಡು ಜಾತಿ ಮತ ಭೇದ ಮರೆತು ಬಿಜೆಪಿ ಪಕ್ಷವನ್ನು ಎಲ್ಲಾ ಜನಾಂಗದವರು ಬೆಂಬಲಿಸುತ್ತಿದ್ದಾರೆ,ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟ್ ಗಳನ್ನು ಗೆದ್ದು ಮತ್ತೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ತಿಳಿಸಿದರು.ಬೀದರ್ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಭಗವಂತ ಖೂಬಾ ತಿಳಿಸಿದರು. ಕಾರ್ಯಕ್ರಮದ ಬಳಿಕ ಗಣೇಶ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ರೋಡ್ ಶೋ ದಲ್ಲಿ ತೆರಳಿ ಶಾಸಕರುಗಳಾದ ಶೈಲೇಂದ್ರ ಬೆಲ್ದಾಳೆ, ಸಿದ್ಲಿಂಗಪ್ಪ ಪಾಟೀಲ್,ಶರಣು ಸಲ್ಗರ್ ಉಮೇದುವಾರಿಕೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವರು ಬಂಡೆಪ್ಪ ಖಾಶಂಪುರ್,ಚಿಂಚೋಳಿಯ ಶಾಸಕರಾದ ಅವಿನಾಶ್ ಜಾಧವ್,ವಿಧಾನ ಪರಿಷತ್ ಸದಸ್ಯ ಶಶಿ ನಮೋಷಿ,ಮಾಜಿ ಶಾಸಕ ಪ್ರಕಾಶ್ ಖಂಡ್ರೆ,ಸುಭಾಷ್ ಗುತ್ತೇದಾರ್,ಮಲ್ಲಿಕಾರ್ಜುನ್ ಖೂಬಾ,ಈಶ್ವರ್ ಸಿಂಗ್ ಠಾಕೂರ್,ಬಿಜೆಪಿ ಬೀದರ್ ಜಿಲ್ಲಾ ಅಧ್ಯಕ್ಷರಾದ ಸೋಮನಾಥ್ ಪಾಟೀಲ್,ಜೆಡಿಎಸ್ ಬೀದರ್ ಜಿಲ್ಲಾ ಅಧ್ಯಕ್ಷರಾದ ರಮೇಶ್ ಕುಮಾರ ಸೋಲ್ಪುರ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.
ವರದಿ:ರೋಹನ್ ವಾಘಮಾರೆ