ಜೇವರ್ಗಿ:ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆದ ನೇಹಾ ಹಿರೇಮಠ ಎಂಬ ಯುವತಿಯ ಕಗ್ಗೊಲೆಯನ್ನು ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆ ನೀಡುವ ಹಾಗೂ ಲವ್ ಜಿಹಾದ್ ಕೃತ್ಯಗಳನ್ನು ಮಟ್ಟ ಹಾಕಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ.
ತೀರಾ ಇತ್ತೀಚಿಗೆ ನಡೆದ ಹುಬ್ಬಳ್ಳಿಯಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಸಹಪಾಠಿಯಿಂದ ಕೊಲೆಯಾದ ನೇಹಾ ಹಿರೇಮಠ ಯುವತಿಯ ಕೊಲೆ ಮೇಲ್ನೋಟಕ್ಕೆ ಬರಿ ಕೊಲೆಯಾಗಿದೆ ಇದು “ಲವ್ ಜಿಹಾದ್” ಎನ್ನುವ ಮಾರಕ ಸಂಚಿನ ಒಂದು ರೂಪವಾಗಿದೆ. ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ಸಂಪರ್ಕ ಸಾಧಿಸುವುದು, ಅವರನ್ನು ನಂಬಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡುವುದು,ಪ್ರೇಮಕ್ಕೆ ವಿರೋಧಿಸಿದರೆ ಅವರನ್ನು ಕೊಲೆ ಮಾಡುವಂತಹ ನೀಚ ಕೃತ್ಯಗಳು ದಿನಂಪ್ರತಿ ಹೆಚ್ಚಾಗುತ್ತಿವೆ. ಈ ಲವ್ ಜಿಹಾದ್ ಕ್ರೂರ ರೂಪವೇ ನೇಹಾಳ ಕೊಲೆಯಾಗಿದೆ ಹೀಗಾಗಿ ಈ ರೀತಿಯ ಲವ್ ಜಿಹಾದ್ ಪ್ರಕರಣಗಳನ್ನು ತಡೆಯುವಲ್ಲಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಮಾಡುವಲ್ಲಿ ಪೊಲೀಸರು ಹಾಗೂ ಸರಕಾರ ಇಲ್ಲಿ ವಿಫಲವಾಗಿದೆ ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ನೇಹಾಳ ಕೊಲೆ ಆರೋಪಿಗೆ ಕಾನೂನಿನ ಮೂಲಕ ಮರಣ ದಂಡನೆಗೆ ಗುರಿ ಮಾಡಬೇಕೆಂದು ಈ ಮೂಲಕ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಅಂತರಾಷ್ಟ್ರೀಯ ಭಜರಂಗದಳ ಮತ್ತು ಭಜರಂಗದಳ ಜೇವರ್ಗಿ ತಾಲೂಕು ಅಧ್ಯಕ್ಷರಾದ ನಾಗರಾಜ ಮೋರ್ಖಂಡೆ ಮತ್ತು ಚಂದ್ರಶೇಖರ ಎಸ್ ಜೈನಾಪೂರ,ಈಶ್ವರ ಹಿಪ್ಪರಗಿ,ವಿರೇಶ ಕೆ ಮಲ್ಲಾ ಕೆ,ಮಹೇಶ ಜೇವರ್ಗಿ,ರವಿ ಎಮ್ ತಳವಾರ,ತಿಪ್ಪಣ್ಣ ಬಿರಾಳ ಹಾಗೂ ಇತರರಿದ್ದರು ಮನವಿ ಪತ್ರ ಸಲ್ಲಿಸಿದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್