ಯಾದಗಿರಿ:ಯಾದಗಿರಿ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ದಿನಾಂಕ 22/04/2024 ರಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಕು.ನೇಹಾ ಹಿರೇಮಠ ವಿಧ್ಯಾರ್ಥಿನಿಯ ಕೊಲೆಯನ್ನು ಖಂಡಿಸಿ ಆರೋಪಿಯನ್ನು ತಕ್ಷಣವೇ ಗಲ್ಲಿಗೆ ಹಾಕುವಂತೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಟ್ಲರ್ ಆಡಳಿತ, ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಪಕ್ಷದ ಜನಪ್ರತಿನಿಧಿಗಳು,ಪಕ್ಷದ ರಾಷ್ಟ್ರ,ರಾಜ್ಯ,ಜಿಲ್ಲಾ, ಮಂಡಲ,ಮಹಾ ಶಕ್ತಿಕೇಂದ್ರ,ಶಕ್ತಿಕೇಂದ್ರ,ಬೂತ್, ಮಟ್ಟದ ಪದಾಧಿಕಾರಿಗಳು,ಕಾರ್ಯಕರ್ತರು ಹಾಗೂ ಎಲ್ಲಾ ಹಿರಿಯ ಮುಖಂಡರು,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್