ಭದ್ರಾವತಿ:ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾದಕ ವಸ್ತುಗಳ ಹಾವಳಿ ತಡೆಯಲು ನಿರಂತರ ದಾಳಿ ನಡೆಸುತ್ತಲೇ ಇದೆ.ಅದೇ ರೀತಿ ಏ.22ರಂದು ಭದ್ರಾವತಿ ಉಪವಿಭಾಗದ ಪೊಲೀಸರು ಭರ್ಜರಿ ಬೇಟೆಯಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕುವರೆ ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಏ.22ರಂದು ಮದ್ಯಾಹ್ನ ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯ ಸಾಯಿ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಖಚಿತ ಮಾಹಿತಿಯನ್ನಾಧರಿಸಿ ಡಿ ವೈ ಎಸ್ ವಿ ಕೆ ಆರ್ ನಾಗರಾಜ್ ಮತ್ತು ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ ಹೊಸಮನೆ ಪೊಲೀಸ್ ಠಾಣೆಯ ಪಿಸ್ಐ ಕೃಷ್ಣ ಕುಮಾರ್ ಬಿ ಮಾನೆ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಹುಸೇನ್ ಬಿ 35 ವರ್ಷದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಅಂದಾಜು ಮೌಲ್ಯ 4.50.000/- ರೂ. ಗಳ 7 ಕೆ.ಜಿ 590 ಗ್ರಾಂ ಒಣ ಗಾಂಜಾವನ್ನು ಅಮಾನತುಪಡಿಸಿಕೊಂಡಿದ್ದಾರೆ. ಆರೋಪಿತಳ ವಿರುದ್ಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕಲಂ 20 (ಬಿ) ii (ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.