ಬೀದರ್:ನಗರದ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಹೂ ನಾರಾಯಣ 94%,
ಸಾಯಿನಾಥ್ ನಾಗನಾಥ್ 90.66%,
ಗಾಯತ್ರಿ ನಾರಾಯಣ 90.33%,
ಕಲ್ಪನಾ ಲಕ್ಷ್ಮಣ 90.16%,
ಸೃಷ್ಟಿ ರಾಜಕುಮಾರ್ 89.66%,
ಸುಹಾಸಿನಿ ಸುನಿಲ್ 89.05%,
ಮಲ್ಲಮ್ಮ ಸುಧಾಕರ್ 89.33%,
ಅನುಪಮಾ 89.33%,
ಆರತಿ ಸಂಜು 83.05%,
ಸಂಜುಕುಮಾರ್ ರಮೇಶ್ 82.66%,
ಪ್ರಿಯಾಂಕ ಬಸವರಾಜ್ 82.05%,
ಸುದರ್ಶಿನಿ ವಿಶಾಲ್ 82%,
ಸಂಜನಾ ಬಸವರಾಜ್ 80.05%,
ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ “ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ವರ್ಷ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ.ಎಲ್ಲಾ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿದ್ದಲ್ಲಿ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ಕಾಣಬಹುದು ಬರುವ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಒಂದಂಕಿಯಲ್ಲಿ ತರಲು ಪ್ರಯತ್ನಿಸಲಾಗುವುದು” ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು.ಕಠಿಣ ಪರಿಶ್ರಮದ ಮೂಲಕ ಅದನ್ನು ನನಸಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಕಾಂತ ಪಾಟೀಲ ಮಾತನಾಡಿ,ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು.ಆದರ್ಶ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಮಂದಕನ್ನಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ,ಶ್ರೀ ಸ್ವಾಮಿ ನರೇಂದ್ರ ಕಾಲೇಜು ನಿರ್ದೇಶಕಿ ಕಲ್ಪನಾ ಮಠಪತಿ, ಪ್ರಾಚಾರ್ಯೆ ಮಂಗಲಾ ಎಂ.ಗಣಿತ ಉಪನ್ಯಾಸಕರಾದ ಶ್ರೀ ಎನ್.ಬಿ. ಮಹೇಶ, ಅರ್ಥಶಾಸ್ತ್ರದ ಉಪನ್ಯಾಸಕರಾದ ಶ್ರೀ ಅನೀಲ ಡಿ.ಎಮ್.ಆಂಗ್ಲ ಉಪನ್ಯಾಸಕರಾದ ಶ್ರೀ ಸಾಗರ್ ಪಡಸಲೆ,ಸಮಾಜ ಶಾಸ್ತ್ರ ಉಪನ್ಯಾಸಕರಾದ ಶ್ರೀ ಶಿವಕುಮಾರ ಬಾವಿಕಟ್ಟಿ,ಜೀವಶಾಸ್ತ್ರದ ಉಪನ್ಯಾಸಕರಾದ ಶ್ರೀ ಸಂದೀಪ,ಶ್ರೀ ಶಶಿಕಾಂತ, ಕಾಲೇಜಿನ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಿಹಿ ಹಂಚಿ ಶುಭ ಹಾರೈಸಿದರು.
ವರದಿ:ಸಾಗರ್ ಪಡಸಲೆ