ಯಾದಗಿರಿ:ವಡಗೇರಾ ತಾಲೂಕಿನ ಸುಕ್ಷೇತ್ರ ಮರೆಮ್ಮ ದೇವಿಯ ಜಾತ್ರಾ ಮಹೋತ್ಸವ ತುಂಬಾ ಅದ್ಧೂರಿಯಾಗಿ ಸಾವಿರಾರು ಭಕ್ತರ ಮಧ್ಯೆ ರಥೋತ್ಸವಕ್ಕೆ ಚಾಲನೆ ನೀಡುವ ಮೂಲಕ ಚಾಲನೆ ನೀಡಲಾಯಿತು.
ಬೆಳಗ್ಗಿನಿಂದ ಗ್ರಾಮದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಊರಿನ ಭಕ್ತರು ನೈವೇದ್ಯ,ಕಾಯಿ ಕರ್ಪೂರ್ ಅರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಸಾಯಂಕಾಲ ೬ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಬೃಹತ್ ರಥೋತ್ಸವ ಜರುಗಿತು.ಈ ಸಂದರ್ಭದಲ್ಲಿ ವಡಿಗೇರಾ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ಮಾಲಿ ಪಾಟೀಲ,ಮಲ್ಲುಗೌಡ ಪೋ.ಪಾಟೀಲ,ಸಿದ್ದಣ್ಣಗೌಡ ಕಾಡಂನೂರ,ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್