ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು,ತಾವು ಸರಕಾರಿ ಸಿಬ್ಬಂದಿಗಳಾಗಿದ್ದರೂ ಕೂಡಾ ಆಸ್ಪತ್ರೆಗೆ ಹೆರಿಗೆಗೆ ಬಂದ ಬಡ ಹೆಣ್ಣುಮಕ್ಕಳ ಹತ್ತಿರ ಸಾವಿರಾರು ರೂಪಾಯಿ ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ತಾಲೂಕಿನ ಸಮುದಾಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಿಗೆ ಗೊತ್ತಾಗದ ಹಾಗೇ ಅಲ್ಲಿನ ಸಿಬ್ಬಂದಿಗಳು ಬಡವರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ.ಇದರಿಂದ ಬಡ ರೈತರು,ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತಿದೆ.ಬಡವ ನೆರೆವಿಗೆ ಇರುವ ಸರಕಾರಿ ಚಿಕಿತ್ಸೆ ಕೇಂದ್ರಗಳಲ್ಲೇ ಇಂತಹ ಅಕ್ರಮ ಹಣ ವಸೂಲಿ ದಂಧೆ ನಡೆಯುತ್ತಿದ್ದರೆ ಬಡವರು ಎಲ್ಲಿಂದ ಅಷ್ಟೊಂದು ದುಡ್ಡ ತರಬೇಕು ಎಂಬುವುದು ತಿಳಿಯುತ್ತಿಲ್ಲ.ನಾವು ಕಡುಬಡವರು ನಮ್ಮ ಬಳಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ಅಷ್ಟೊಂದು ಹಣ ಇಲ್ಲದೇ ಕಾರಣ ನಾವು ಸರಕಾರಿ ಚಿಕಿತ್ಸೆ ಕೇಂದ್ರಗಳಿಗೆ ಬಂದರೆ,ಇಲ್ಲಿನ ಸಿಬ್ಬಂದಿ ನಮ್ಮಂಥ ಬಡವರ ಬಳಿಯೇ ಸಾವಿರಾರು ರೂಪಾಯಿ. ಹಣ ವಸೂಲಿ ಮಾಡುತ್ತಿದ್ದಾರೆ.
ನಾನು ಕೂಡಾ ಒಬ್ಬ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುನೀತಾ ಕೊಂಕಲ್ ಅವರು ಹೆರಿಗೆ ಚಿಕಿತ್ಸೆಗೆ ಬಂದು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್