ಕುಷ್ಟಗಿ:ಶಿವಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಬಣಜಿಗ ಸಮಾಜದ ಅಧ್ಯಕ್ಷ ಸಣ್ಣ ಈರಪ್ಪ ಅಂಗಡಿ ಅವರು ಹೇಳಿದರು.
ತಾಲೂಕಿನ ಕೇಸೂರು ಗ್ರಾಮದ ಶ್ರೀವಿಜಯ ಮಹಾಂತೇಶ್ವರ ಮಠದ ಆವರಣದಲ್ಲಿ ಬಣಜಿಗ ಸಮಾಜದಿಂದ ನಡೆದ ಅಕ್ಕಮಹಾದೇವಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕ ನಾಗರಾಜ ಪಟ್ಟಣಶೆಟ್ಟರ ಮಾತನಾಡಿ ವೈರಾಗ್ಯಕ್ಕೆ ಮತ್ತೊಂದು ಹೆಸರೇ ಅಕ್ಕಮಹಾದೇವಿ. ಎಲ್ಲರೂ ಸುಖ,ಸಂಪತ್ತು ಅರಸುತ್ತಾ ಹೋಗುತ್ತೇವೆ. ಆದರೆ ಅಕ್ಕ ಮಹಾದೇವಿ ಅವರು ಅದನ್ನು ಧಿಕ್ಕರಿಸಿ ಅಧ್ಯಾತ್ಮದ ಕಡೆ ಬಂದರು.ವಿಶ್ವಗುರು ಬಸವಣ್ಣ, ಅಲ್ಲಮಪ್ರಭು ಅವರಂತೆ ಅಕ್ಕಮಹಾದೇವಿ ಅವರ ವಿಚಾರಧಾರೆ,ಚಿಂತನೆಗಳು ಜಾಗತಿಕ ಚಿಂತಕರ ಗಮನ ಸೆಳೆದಿವೆ ಎಂದರು.
ರಾಜಶೇಖರ ಹೊಕ್ರಾಣಿ ಮಾತನಾಡಿ ಬಸವಾದಿ ಶರಣರ ವಚನಗಳಲ್ಲಿ ಬಹುಪಾಲು ವಚನ ಅಕ್ಕಮಹಾದೇವಿ ಅವರದಾಗಿವೆ.ಅಕ್ಕ ಮಹಾದೇವಿಯ ಬದುಕನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.ಆದರೆ ಅಕ್ಕನ ವೈರಾಗ್ಯ ಮತ್ತು ಆತ್ಮಪ್ರಜ್ಞೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎನ್ನುವುದಕ್ಕೆ ಅವರ ವಚನಗಳ ಸಂದೇಶವೇ ಸಾಕ್ಷಿ. ಅಕ್ಕನವರು ವಚನಗಳಲ್ಲದೆ ವಚನೇತರ ಸಾಹಿತ್ಯಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಮುಖಂಡರಾದ ಕರಬಸಪ್ಪ ಪಟ್ಟಣಶೆಟ್ಟರ, ಬಸವರಾಜ ಶೆಟ್ಟರ,ಬಸವರಾಜ ಕಡಿವಾಳ,ಮಲ್ಲಪ್ಪ ಕೇಣೇದ,ಈರಣ್ಣ ಖಾನಾಪೂರ,ಅಮರೇಶ ತಾರಿವಾಳ, ಮಂಜುನಾಥ ಅಂಗಡಿ,ಪರಶಿವಮೂರ್ತಿ ಮಾಟಲದಿನ್ನಿ ಸೇರಿದಂತೆ ಹಲವರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.