ಬೀದರ್:- ಉತ್ತರ ಪ್ರದೇಶದ ಯು.ಜಿ.ಸಿ. ಮಾನ್ಯತೆ ಪಡೆದ ಗ್ಲೋಕಲ್ ವಿಶ್ವವಿದ್ಯಾಲಯ ಸಹಾರನಪುರದಲ್ಲಿ ದಿನಾಂಕ 21.04.2024 ರಂದು ಸಾಯಂಕಾಲ 7:00 ಗೆ ನಡೆದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಬೀದರ್ ಜಿಲ್ಲೆಯ,ನೂರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಮ್ಮದ್ ಇಮ್ರಾನ್ ಸೈಯದ್ ರವರಿಗೆ ಉತ್ತರ ಪ್ರದೇಶ ಸರ್ಕಾರದ ನಿವೃತ್ತಿ ಪ್ರಧಾನ ಕಾರ್ಯದರ್ಶಿ ಎನ್.ಹೆಚ್.ರಿಜ್ವೀ ಮತ್ತು ಭಾರತ ಸರ್ಕಾರದ ಎನ್.ಟಿ.ಎನ್.ಎಲ್, ಎಸ್.ಟಿ.ಪಿ.ಐ.,ಐ.ಟಿ ಸರ್ವಿಸ್ನ ಸಿ.ಇ.ಓ. ಡಾಕ್ಟರ್ ರಜನೀಶ್ ಅಗ್ರವಾಲ್ ಹಾಗೂ ಗ್ಲೋಕಲ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಪಿ.ಕೆ ಭಾರತಿ ರವರು ಪಿ.ಎಚ್.ಡಿ ಪ್ರಶಸ್ತಿ ಪ್ರಧಾನ ಮಾಡಿದರು.ಡಾ.ಮೊಹಮ್ಮದ್ ಇಮ್ರಾನ ಸೈಯದ್ ರವರು 2018 ರಲ್ಲಿ ಪಿ.ಎಚ್.ಡಿ ಪದವಿಗಾಗಿ ಪ್ರವೇಶ ಪರೀಕ್ಷೆ ಮುಖಾಂತರ ಪ್ರವೇಶ ಪಡೆದು ಸತತ ಐದು ವರ್ಷಗಳ ಪಿ ಎಚ್ ಡಿ ಇನ್ ಎಜುಕೇಶನ್ ಕ್ಷೇತ್ರದಲ್ಲಿ ಸತತ ಪ್ರಯತ್ನದಿಂದ ಕ್ರಿಯೆಟಿಂಗ್ ಎಫಿಷಿಯೆಂಟ್ ಲರ್ನಿಂಗ್ ಫೆಸಿಲಿಟೇಟ್ ದ ಪ್ರೋಸೆಸ್ ಆಫ್ ಅರ್ಲಿ ಚೈಲ್ಡ್ ಹೂಡ್ ಎಜುಕೇಶನ್ ಎಂಬ ವಿಷಯದ ಬಗ್ಗೆ ಮಂಡಿಸಿ 2023 ರಲ್ಲಿ ಮುಕ್ತಾಯಗೊಂಡಿರುತ್ತದೆ. ನೋಂದಣಿ ಸಂಖ್ಯೆ :GU18R1350 ಕ್ರಮ ಸಂಖ್ಯೆ: GU/PHD-EDU18/0452/2024, ವರ್ಷ-2018-2023 ಆಗಿರುತ್ತದೆ ಎಂದು ತಿಳಿಸಿದರು.
ಡಾ.ಮಹಮ್ಮದ್ ಇಮ್ರಾನ್ ಸೈಯದ್ ರವರು ಡಾಕ್ಟರ್ ಅಶೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ.ಗೋಪಿ ಶರ್ಮರವರ ನೇತೃತ್ವದಲ್ಲಿ ,ಡಾ.ಸಂಜೀವ್ ಸಕ್ಸೆನಾ ರವರ ಅಧ್ಯಕ್ಷತೆಯಲ್ಲಿ ಹಾಗೂ ಡಾ.ಜಿತೇಂದ್ರ ರಾಯ್ ಅವರ ಸಹಕಾರದಿಂದ ಹಾಗೂ ಐದು ವರ್ಷಗಳ ಸತತ ಪ್ರಯತ್ನದಿಂದ ಈ ಸಾಧನೆಯನ್ನು ಪೂರ್ಣಗೊಳಿಸಿರುತ್ತಾರೆ.ಈ ಸಾಧನೆಯನ್ನು ಕುರಿತು ನೂರ್ ಕಾಲೇಜಿನ ಅಧ್ಯಕ್ಷರಾದ ಮೊಹಮ್ಮದ್ ಅಯಾಜ್ ಖಾನ್ ಆಡಳಿತ ಅಧಿಕಾರಿ ಮೊಮ್ಮದ್ ಯೂಸುಫ್ ಖಾನ್ ಹಾಗೂ ಸಿಬ್ಬಂದಿ ವರ್ಗದವರು ನಿಕವರ್ತಿಗಳು ಹಾಗೂ ಸಂಬಂಧಿಕರು ಹರ್ಷ ವ್ಯಕ್ತಪಡಿಸಿದರು.
ವರದಿ:ರೋಹನ್ ವಾಘಮಾರೇ