ಮತ್ತೆ ಮತ್ತೆ ಬರತಾವ ಚುನಾವಣೆ
ಹೊತ್ತು ಹೊತ್ತು ತರತಾರ ಬಣ್ಣ ಬಣ್ಣದ ಘೋಷಣೆ ಓಣಿ ಓಣಿಯಲ್ಲೂ ಕುರಿ-ಕೋಳಿಗಳ ವಗ್ಗರಣೆಯ ವಾಸನೆ
ಕತ್ತಲಾದರೆ ಸಾಕು ಝಣ ಝಣ ಕಾಂಚಾಣದ ನರ್ತನ
ಉದ್ದಾರವಾಗುತ್ತಿಲ್ಲ ಬಡ ಮಕ್ಕಳ ಪಾಲಿನ ಸರ್ಕಾರಿ ಶಾಲೆ ಯಾಕೆಂದರೆ ಪಕ್ಕದಲ್ಲೇ ಇವೆ ಆಳುವವರ ಖಾಸಗಿ ಶಾಲೆ
ಹಾಳು ಬಿದ್ದಿವೆ ಹಳ್ಳಿಗರ ಸರ್ಕಾರಿ ದವಾಖಾನೆ
ಯಾಕೆಂದರೆ ಶಾಸಕರುಗಳದ್ದೇ ಇವೆ ಮಲ್ಟಿಸ್ಪೆಷಾಲಿಟಿ ದವಾಖಾನೆ
ಬಡವನಿಗಿಲ್ಲ ನಿಶ್ಚಿಂತೆಯಾಗಿ ಮಲಗಲು ಸ್ವಂತ ಸಣ್ಣ ಮನೆ
ಆದರೆ ಆಳುವವರು ಹೊಂದಿದ್ದಾರೆ ಊರಿಗೊಂದೊಂದು ಅರಮನೆ
ಸತಾಯಿಸುತ್ತವೆ ರೈತನ ಬೆಳೆಗೆ ಬಿಲ್ಲು ನೀಡದೇ ಕಾರ್ಖಾನೆ
ಯಾಕೆಂದರೆ ಎಲ್ಲವೂ ಅವರದೇ ಬ್ಯಾಂಕು
ಕಚೇರಿ ಕಾರ್ಖಾನೆ
ಜನಪ್ರತಿನಿಧಿಗಳೇ ಇರಲಿ ದೇಶ-ಧರ್ಮ, ಸಂಸ್ಕೃತಿ-ಸಂಸ್ಕಾರಗಳ ಪರಿಜ್ಞಾನ ಕುಂದದಿರಲಿ ನಾವೆಲ್ಲ ಭಾರತೀಯರೆಂಬ ನಮ್ಮೊಳಗಿನ ಅಪ್ಪಟ ದೇಶಾಭಿಮಾನ ತಾತ್ಯಾ,ಭಗತ್,ಸುಭಾಷ್ ಮಾಡಿದರು ಅಂದು ದೇಶಕ್ಕಾಗಿ ಬಲಿದಾನ ನಾವು ನೀವೆಲ್ಲಾ ಮಾಡಬೇಕಿದೆ ಇಂದು ನಮ್ಮನ್ನು ಮಾರಿಕೊಳ್ಳದೇ ಮತದಾನ.