ಸೊರಬ:ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಇದಾಗಿದ್ದು,ಬರೀ ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆ ತಾಲೂಕಿನ ಸ್ವಗ್ರಾಮ ಕುಬಟೂರಿನ ಬಂಗಾರ ನಿವಾಸದಲ್ಲಿ ಎಸ್ ಬಂಗಾರಪ್ಪ ಶಕುಂತಲಮ್ಮ ದಂಪತಿಗಳ ಭಾವಚಿತ್ರಕ್ಕೆ ಪೂಜೆ ಪೂಜೆ ಸಲ್ಲಿಸಿ ನಂತರ ಗ್ರಾಮದ ಗಣಪತಿ ದೇವಸ್ಥಾನ, ದ್ಯಾಮವ್ವ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ನಂತರ ಪತ್ನಿ ಅನಿತಾ ಜೊತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಬಂಗಾರಪ್ಪಮೋದಿ ಬಂದಮೇಲೇನೇ ದೇಶ ಅಭಿವೃದ್ಧಿಯಾಯಿತಾ?ಎಪ್ಪತ್ತು ವರ್ಷ ಕಾಂಗ್ರೆಸ್ ಸರ್ಕಾರದಲ್ಲಿ ಇವರೆಲ್ಲಾ ಬದುಕಿರಲಿಲ್ಲವೇ?ಎಂದು ಪ್ರಶ್ನಿಸಿದ ಮಧು,ಅಭಿವೃದ್ಧಿ ಹೆಸರಿನಲ್ಲಿ ಸುಳ್ಳನ್ನು ಬಿಜೆಪಿ ಹತ್ತು ವರ್ಷಗಳಲ್ಲಿ ಮಾಡಿದೆ.ಇದನ್ನು ಸಾಮಾನ್ಯ ಜನರೂ ಸಹ ತಿಳಿದುಕೊಡಿದ್ದಾರೆ.2023ರ ಚುನಾವಣೆಯಲ್ಲಿ ನಂಬಿಕೆ ವಿಶ್ವಾಸದ ಮೇಲೆ ಕಾಂಗ್ರೆಸ್‌ಗೆ ಮತ ಹಾಕಿದ್ದರ ಪರಿಣಾಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.ಗ್ಯಾರೆಂಟಿ
ಯೋಜನೆಗಳು ಚೆನ್ನಾಗಿ ಜನರನ್ನು ಕಾಂಗ್ರೆಸ್ ಅನ್ನು ತಲುಪಿದೆ ಎಂದರು.
ಬಡವರ ಹಣವನ್ನು ಬಡವರಿಗೆ ಜನಸಾಮಾನ್ಯರಿಗೆ ಗ್ಯಾರೆಂಟಿ ಯೋಜನೆಗಳ ಮೂಲಕ ಜನರಿಗೆ ತಲುಪುತ್ತಿರುವುದನ್ನು ನೋಡಿ ಅದರಲ್ಲಿಯೂ ಹೆಣ್ಣುಮಕ್ಕಳ ಶಕ್ತಿಯೋಜನೆ,ಗೃಹಜ್ಯೋತಿ, ಭಾಗ್ಯಲಕ್ಷ್ಮೀ ಯೋಜನೆಯಿಂದಾಗಿ ಬಹಳ ಸಂತಸಪಟ್ಟು ಕಾಂಗ್ರೆಸ್ ಸರ್ಕಾರವನ್ನು ಮೆಚ್ಚಿರುವುದನ್ನು ಕಂಡು ಗ್ಯಾರೆಂಟಿಯೋಜನೆಗಳ ಉಪಾಧ್ಯಕ್ಷನಾಗಿರುವ ತಮಗೆ ಬಹಳ ಹೆಮ್ಮೆ ಎನಿಸುತ್ತದೆ ಎಂದರು.
ಗೀತಾ ಶಿವರಾಜ್ ಕುಮಾರ್ ಪರ ದುಡಿದ ಪಕ್ಷದ ಕಾರ್ಯಕರ್ತರಿಗೂ ಹಾಗೂ ಪ್ರಚಾರ ಮಾಡಿದ ರಾಹುಲ್ ಗಾಂಧಿ,ಎಐಸಿಸಿ ಅಧ್ಯಕ್ಷ ಗೀತಾ ಶಿವರಾಜಕುಮಾರ್,ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ,ಉಸ್ತುವಾರಿ ಸುರ್ಜೇವಾಲಾ ಅವರಿಗೆ ಧನ್ಯವಾದ ಅರ್ಪಿಸಿದರು.
ವರದಿ-ಸಂದೀಪ ಯು.ಎಲ್.,ಸೊರಬ