ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಅತ್ಯಂತ ಬಿರುಸಿನಿಂದ ನಡೆದ ಚುನಾವಣೆ ಪ್ರಚಾರ ರಂಗು ಕೊನೆಗೆ ನಿನ್ನೆ ಮತದಾನವಾಗಿದ್ದು ಸುಡು ಬಿಸಿಲಿನ ತಾಪಮಾನದ ಮಧ್ಯದಲ್ಲೂ ಶೇ.61.08% ರಷ್ಟು ಮತದಾನವಾಗಿದೆ ಎಂದು ತಿಳಿಸಿದು ಬಂದಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡುವುದರೊಂದಿಗೆ 265 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಬೆಳಗಿನಿಂದಲೇ ಮಹಿಳೆಯರು ಹೆಚ್ಚು ಹೆಚ್ಚು ಮತಗಟ್ಟೆಗೆ ಧಾವಿಸಿ ಮತದಾನ ಮಾಡಿದರು.
ಹಳಿಸಗರ ಗ್ರಾಮದಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು ಮತ್ತು ಇತರೆ ಅನೇಕ ಕಡೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಉರಿ ಬಿಸಿಲಿನ ತಾಪಕ್ಕೆ ಮಣಿದ ಮತದಾರರು ಛತ್ರಿಗಳನ್ನು ಬಳಸಿ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಿದ್ದು ವಿಶೇಷವಾಗಿತ್ತು.ತಾಪಮಾನಕ್ಕೆ ಕೆಲವೊಂದು ಕಡೆಗಳಲ್ಲಿ ನಿಗದಿತ ಸಮಯ ಮಿಕ್ಕಿ ಪ್ರಾರಂಭಗೊಂಡಿದ್ದು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್