ಕೊಪ್ಪಳ:ಜಿಲ್ಲೆಯ ಕುಕನೂರ ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ ೨೧ ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಅಂಗವಾಗಿ ಶ್ರೀ ಭೀಮಾಂಬಿಕಾ ನವ ತರುಣ ನಾಟ್ಯ ಸಂಘ ಭಟಪನಹಳ್ಳಿ ಇವರಿಂದ ರೈತರ ರಾಜ್ಯದಲ್ಲಿ ರಾಯಣ್ಣ ಸುಂದರ ಸಾಮಾಜಿಕ ನಾಟಕ ಜರುಗಿತು.ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸಿವೆ,ಕಲಾವಿದರು ತಮ್ಮ ಕಲೆಯನ್ನು ಪ್ರತಿ ವರ್ಷ ಅಭಿನಯ ಮಾಡಿ ಜನತೆಗೆ ಮನರಂಜನೆ ನೀಡುತ್ತಾರೆ ಇಂತಹ ಕಲೆ ಉಳಿವಿಗಾಗಿ ಕಲಾ ರಂಗಕ್ಕೆ ನಮ್ಮೇಲ್ಲರ ಪ್ರೋತ್ಸಾಹ,ಸಹಕಾರ ಅಗತ್ಯವಾದದು ಎಂದು ಹಾಲುಮತ ಸಮಾಜದ ಮುಖಂಡ ಕಳಕಪ್ಪ ಕಂಬಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧ್ಯಕ್ಷತೆಯನ್ನು ಗಗನ ನೋಟಗಾರ ವಹಿಸಿದ್ದರು.ಶಿವಾನಂದಯ್ಯ ಹಿರೇಮಠ ಸಾನಿದ್ಯವಹಿಸಿದ್ದರು.ಈ ವೇಳೆ ಮುಖಂಡರಾದ ಮಹೇಶ ದೊಡ್ಡಮನಿ,ಮಲ್ಲಪ್ಪ ಗುಡಿಹಿಂದಲ್,ಶರಣಪ್ಪ ಹಾದಿಮನಿ,ಹಂಚಾಳಪ್ಪ ಕಲ್ಲಗೋಡಿ,ಪರಸಪ್ಪ ಹೊಸಮನಿ,ಗವಿಸಿದ್ದಪ್ಪ ಭಾವಿಕಟ್ಟಿ,ಯಲ್ಲಪ್ಪ ದೇವರಳ್ಳಿ,ಕೆಂಚಪ್ಪ ಹರಿಜನ,
ರಮೇಶ ಪೋತುಂಡಿ ಸೇರಿದಂತೆ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.