ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಸೋಮನಹಳ್ಳಿ ಹೋಬಳಿ ವರ್ಲಕೊಂಡ ಗ್ರಾಮದ ನಿವಾಸಿಗಳಾದಂತಹ ಚಂದ್ರಕಲಾ ಮತ್ತು ಪದ್ಮ ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ ಮದ್ದರೆಡ್ಡಿಹಳ್ಳಿ ಗ್ರಾಮದ ನಿವಾಸಿಯಾದ ಲಕ್ಷ್ಮೀನಾರಾಯಣ s/o ವೆಂಕಟರಾಯಪ್ಪ ಮೇಲ್ಜಾತಿಗೆ ಸಂಬಂಧಿಸಿದವರಾಗಿದ್ದು ಚಂದ್ರಕಲಾ ಮತ್ತು ಪದ್ಮರವರು ದಲಿತ ಕುಟುಂಬದವರಾಗಿರುತ್ತಾರೆ ಇವರು ಸರ್ವೇ ನಂಬರ್ 17/3 ರಲ್ಲಿ 3.20 ಗುಂಟೆ ಜಮೀನನ್ನು ಹೊಂದಿದ್ದು ಮದ್ದರೆಡ್ಡಿ ಹಳ್ಳಿ ಗ್ರಾಮದ ನಿವಾಸಿಯಾದಂತ ಲಕ್ಷ್ಮೀನಾರಾಯಣ s/o ವೆಂಕಟರಾಯಪ್ಪ ನವರು 2.ಕುಂಟೆ ಜಾಗವನ್ನು ಆಕ್ರಮಣ ಮಾಡಿ ಕಬಳಿಸಿದ್ದಾರೆ ಆ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಿದ್ದರು ನಿರ್ಮಾಣ ಮಾಡಿಕೊಂಡಿರುವ ಶೆಡ್ ತೆರುವು
ಗೊಳಿಸಲು ಗುಡಿಬಂಡೆ ತಾಲೂಕು ದಂಡಾಧಿಕಾರಿ ಮನೀಷ ರವರ ಬಳಿ ಹೋಗಿ ಮನವಿ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿ,ದಾಖಲೆಗಳನ್ನು ಪರಿಶೀಲಿಸಿದ ನಂತರ ಸರ್ವೆ ಕಾರ್ಯ ಮಾಡುವಂತೆ ಮಾನ್ಯ ತಾಲ್ಲೂಕು ಸರ್ವೆಯರ್ ಮಹೇಶ್ ಅವರಿಗೆ ಮಾಹಿತಿ ತಿಳಿಸಿ ಸರ್ವೇ ಮಾಡುವಂತೆ ಹೇಳಿದರು ಸರ್ವೆ ಕಾರ್ಯ ಮುಗಿದ ನಂತರ ಲಕ್ಷ್ಮೀನಾರಾಯಣಪ್ಪ ಆಕ್ರಮಣ ಮಾಡಿಕೊಂಡಂತ ಶೆಡ್ ಅನ್ನು ತೆರವುಗೊಳಿಸುವಂತೆ ಮಾನ್ಯ ತಾಲ್ಲೂಕು ದಂಡಾಧಿಕಾರಿ ಬಳಿ ಚಂದ್ರಕಲಾ ಮತ್ತು ಪದ್ಮರವರು ತಮ್ಮ ಅಳಲನ್ನು ತೋಡಿಕೊಂಡರು.
ಸರ್ವೆ ಕಾರ್ಯ ಕಾನೂನಾತ್ಮಕ ಚೌಕಟ್ಟಿನಲ್ಲಿ ನಡೆಯಿತು.ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಾ ನೀವು ಎಂದು ಏಕಾಏಕಿಯಾಗಿ ದಲಿತ ಮಹಿಳೆಯರಿಗೆ ಮನಸ್ಸಿಗೆ ನೋವಾಗುವಂತೆ ಮಾತನಾಡಿ ನಂತರ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದೀರಾ ನೀವು ಎಂದು ಆರೋಪ ಮಾಡುವುದರ ಮೂಲಕ ಚಂದ್ರಕಲಾರವರ ಕೈಯಲ್ಲಿದ್ದಂತ ಮೊಬೈಲನ್ನು ಕಸಿಯುವುದರ ಜೊತೆಗೆ ರಕ್ತ ಬರುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ ನಂತರ 20 ನಿಮಿಷಗಳ ಕಾಲ ಡೋರ್ ಅನ್ನು ಕ್ಲೋಸ್ ಮಾಡಿ ರೂಮಿನ ಒಳಗಡೆ ಕೂಡಿ ಹಾಕಿದರು ನಂತರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ M L Cಯನ್ನು ಸಹ ಪಡೆದಿರುತ್ತಾರೆ ತಾಲ್ಲೂಕು ದಂಡಾಧಿಕಾರಿ ಮನಿಷಾ ರವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಏಕ ಪಕ್ಷೀಯ ಪ್ರಕರಣ ದಾಖಲಿಸಿದ್ದಾರೆ.
ಗುಡಿಬಂಡೆ ತಾಲೂಕು ವರದಿಗಾರ ಮಂಜುನಾಥ್