ಶಿವಮೊಗ್ಗ:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಜಂಟಿಯಾಗಿ 2024ರ ಜೂನ್ 8 ರಂದು ವಿಶ್ವ ಪರಿಸರ ದಿನವನ್ನು ಆಯೋಜಿಸುತ್ತಿದ್ದು,ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸೃಜನಶೀಲತೆ, ನಾವೀನ್ಯತೆ ಮತ್ತು ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ಸಕ್ರಿಯತೆಯನ್ನು ಉತ್ತೇಜಿಸಲು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಇದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ತಮ್ಮ ಕೊಡುಗೆ ನೀಡಲು ಅವಕಾಶವನ್ನು ಒದಗಿಸುತ್ತದೆ.
ಕರ್ನಾಟಕ ರಾಜ್ಯದ ಯಾವುದೇ ಮಂಡಳಿಯಲ್ಲಿ ಪ್ರಸ್ತುತ ದಾಖಲಾದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು
ಪ್ರಬಂಧಗಳನ್ನು ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಸಲ್ಲಿಸಬಹುದು.ಪ್ರತಿ ಭಾಷೆಗೆ ಒಬ್ಬ ಸ್ಪರ್ಧಿಗೆ ಕೇವಲ ಒಂದು ಪ್ರಬಂಧವನ್ನು ಮಾತ್ರ ಸಲ್ಲಿಸಲು ಅವಕಾಶವಿದೆ.ಯಾವುದೇ ಸ್ಪರ್ಧಿಯು ಒಂದು ನಿರ್ದಿಷ್ಟ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಿರುವುದು ಕಂಡುಬಂದರೆ, ಅವರು ಸಲ್ಲಿಸಿದ ಎಲ್ಲಾ ಪ್ರಬಂಧಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
ಪ್ರಬಂಧದ ಕೊನೆಯಲ್ಲಿ ಹೆಸರು,ವಿಳಾಸ,ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿವರಗಳನ್ನು ಒದಗಿಸಬೇಕು. ಪ್ರಬಂಧವನ್ನು ಮೇ 27ರೊಳಗಾಗಿ ಸಲ್ಲಿಸುವುದು.
ಮೂಲ ಪ್ರಬಂಧ ಮಾತ್ರ ಅರ್ಹ ಮತ್ತು ಬೇರೆ ಯಾವುದೇ ಸ್ಪರ್ಧೆ(ಗಳಿಗೆ) ಸಲ್ಲಿಸಿರಬಾರದು ಅಥವಾ ಬೇರೆ ರೀತಿಯಲ್ಲಿ ಪ್ರಕಟಿಸಿರಬಾರದು. ಕೃತಿಚೌರ್ಯಕ್ಕಾಗಿ ಎಲ್ಲಾ ಪ್ರಬಂಧಗಳನ್ನು ಪರಿಶೀಲಿಸಲಾಗುತ್ತದೆ.ಪ್ರಬಂಧವನ್ನು ಒಮ್ಮೆ ಸಲ್ಲಿಸಿದ ನಂತರ,ಸ್ಪರ್ಧಿಗಳಿಗೆ ಯಾವುದೇ ಪರಿಷ್ಕರಣೆಗಳನ್ನು ಮಾಡಲು ಅನುಮತಿಸಲಾಗುವುದಿಲ್ಲ.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ರಚಿಸಿದ ತಜ್ಞರ ಸಮಿತಿಯು ಪ್ರಬಂಧಗಳನ್ನು ಮೌಲ್ಯಮಾಪನ ಮಾಡುತ್ತದೆ. ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲರೂ ಇದಕ್ಕೆ ಬದ್ಧರಾಗಿರಬೇಕು.
ಮೊದಲ ಮೂರು ಸ್ಥಾನ ಪಡೆದ ಪ್ರಬಂಧಗಳು ನಗದು ಬಹುಮಾನಗಳನ್ನು ನೀಡಲಾಗುವುದು: 1ನೇ ಬಹುಮಾನ ರೂ.5,000/-2ನೇ ಬಹುಮಾನ ರೂ. 3,000/- ಮತ್ತು 3ನೇ ಬಹುಮಾನ ರೂ. 2.000/-. ಇಂಗ್ಲೀಷ್ ಮತ್ತು ಕನ್ನಡ ಪ್ರಬಂಧಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುವುದು.ಸ್ಪರ್ಧೆಯ ವಿಜೇತರನ್ನು ಇಮೇಲ್ ಮೂಲಕ ಸಂಪರ್ಕಿಸಲಾಗುತ್ತದೆ.ಬಹುಮಾನ ವಿಜೇತರು ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.
ಎಲ್ಲಾ ಪ್ರಬಂಧಗಳು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಜಂಟಿ ಒಡೆತನಕ್ಕೆ ಒಳಗೊಂಡಿರುತ್ತವೆ ಹಾಗೂ ಪ್ರಬಂಧಗಳನ್ನು ಯಾವುದೇ ಉದ್ದೇಶಕ್ಕಾಗಿ ಯಾವುದೇ ಮಾಧ್ಯಮದಲ್ಲಿ ಬಳಸುವ, ಪುನರುತ್ಪಾದಿಸುವ,ಪ್ರಕಟಿಸುವ,ಪ್ರಸಾರ ಮಾಡುವ ಅಥವಾ ಇತರ ರೀತಿಯಲ್ಲಿ ಸಂವಹನ ನಡೆಸುವ ಹಕ್ಕನ್ನು ಹೊಂದಿರುತ್ತದೆ.
ಮೌಲ್ಯಮಾಪನ ಮಾನದಂಡಗಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಯನ್ನು ಪುರಸ್ಕರಿಸಲಾಗುವುದಿಲ್ಲ.ಅಗತ್ಯವಿದ್ದರೆ ಮೇಲಿನ ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಮತ್ತು ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಅಂತಿಮ ಹಕ್ಕನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಹೊಂದಿರುತ್ತದೆ ಪ್ರಬಂಧವು 1000 ಪದಗಳನ್ನು ಮೀರಬಾರದು ಮತ್ತು ಇಂಗ್ಲೀಷ್ ನಲ್ಲಿ ಏರಿಯಾಲ್ ಫಾಂಟ್ ಗಾತ್ರ 14 ಮತ್ತು ಕನ್ನಡದಲ್ಲಿ ನುಡಿ ಯೂನಿಕೋಡ್ 12 ಗಾತ್ರದಲ್ಲಿ ಟೈಪ್ ಮಾಡಿ ಕಳುಹಿಸಬೇಕು.
ಪ್ರಬಂಧ ರಚನೆ:ಪ್ರಬಂಧವನ್ನು ಪೀಠಿಕೆ,ಮುಖ್ಯ ಪ್ಯಾರಗಳು ಮತ್ತು ತೀರ್ಮಾನ ಎಂಬ ವಿಭಾಗಗಳಿರುವಂತೆ ರಚಿಸಬಹುದು.ಇದು ಕೇವಲ ಸೂಚಿಸಿದ ಮತ್ತು ನಿರೀಕ್ಷಿತ ಮೂಲ ರಚನೆಯಾಗಿದ್ದು, ಅಗತ್ಯ ಅಥವಾ ಪ್ರಸ್ತುತವೆನಿಸಿದರೆ ಇತರ ವಿಭಾಗಗಳನ್ನು ಒಳಗೊಂಡಂತೆ ರಚಿಸಬಹುದು.
ಮೌಲ್ಯಮಾಪನ ಮಾನದಂಡ:ಪ್ರಬಂಧಗಳನ್ನು ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ವಿಷಯ ಪ್ರಸ್ತುತತೆ ಮತ್ತು ಸ್ವಂತಿಕೆ (30%),ಪ್ಯಾರಾಗಳ ನಡುವೆ ಸಂಪರ್ಕ, ಸುಸಂಬದ್ಧತೆ, ರಚನೆ ಮತ್ತು ಪದ ಮಿತಿ (20%), ಸೃಜನಶೀಲತೆ ಮತ್ತು ಪ್ರಸ್ತುತಿ (30%), ಭಾಷೆ, ನ್ಯಾಯಸಮ್ಮತತೆ, ನಿರರ್ಗಳತೆ, ಸಾಮಥ್ರ್ಯ (20%).
ಪ್ರಬಂಧದ ಹಾರ್ಡ್ ಕಾಫಿಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರೋ.ಯು.ಆರ್.ರಾವ್ ವಿಜ್ಞಾನ ಭವನ,ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕೆ ವಿಜ್ಞಾನ ಕಾಲೇಜು ಪ್ರವೇಶ ದ್ವಾರದ ಬಳಿ,ವಿದ್ಯಾರಣ್ಯಪುರ ಪೋಸ್ಟ್ ,ಯಲಹಂಕ, ಬೆಂಗಳೂರು-560 097,ವಿಳಾಸಕ್ಕೆ ಅಂಚೆ ಮೂಲಕ ಮತ್ತು ಪಿಡಿಎಫ್ ಪ್ರತಿಯನ್ನು ಇ-ಮೇಲ್ essay.ksta@gmail.com ಗೆ ಕಳುಹಿಸುವುದು
ಪ್ರಬಂಧದ ಜೊತೆಗೆ ವಿದ್ಯಾರ್ಥಿಯ ಗುರುತಿನ (ಆಧಾರ್/ವಿದ್ಯಾರ್ಥಿ ಐಡಿ ಕಾರ್ಡ್) ಪುರಾವೆಯನ್ನು ಸಲ್ಲಿಸಿ (ಪೋಸ್ಟ್ ಮೂಲಕ ಹಾರ್ಡ್ ಕಾಪಿ ಮತ್ತು ಮೇಲೆ ನೀಡಲಾದ ಇಮೇಲ್ ಗೆ ಸಾಫ್ಟ್ ಕಾಪಿ) ಕಳುಹಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ.