ಶಿರಸಿ:ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ,ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ (ರಿ.)ಸೋಂದಾ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶ್ರೀ ಲಕ್ಷ್ಮೀನೃಸಿಂಹ జయంతిಯನ್ನು ದಿನಾಂಕ 21-05-2024 ಮತ್ತು 22-05-2024ರಂದು ಸುಧರ್ಮಾ ಸಭಾಂಗಣ ಸ್ವರ್ಣವಲ್ಲೀ ಸಂಸ್ಥಾನ ಇಲ್ಲಿ ಜರುಗುವುದು.
ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ (ರಿ.)ಇದರ ವತಿಯಿಂದ ಕೃಷಿ ಜಯಂತಿ,ವಿಚಾರ ಗೋಷ್ಟಿ,ಸಾಂಸ್ಕೃತಿಕ ಸ್ಪರ್ಧೆಗಳು,ಕೀರ್ತನೆ,ಯಕ್ಷ ಶಾಲ್ಮಲಾದಿಂದ ‘ಚಂದ್ರಹಾಸ’ ಯಕ್ಷಗಾನ ಪ್ರದರ್ಶನ ಹಾಗೂ ಅನೇಕ ವಿಶೇಷ ಕಾರ್ಯಕ್ರಮಗಳು ಕೂಡಾ ಜರುಗುವುದು ಎಂದು ಶ್ರೀ ಸ್ವರ್ಣವಲ್ಲಿ ಮಠ ಪ್ರಕಟಣೆ ತಿಳಿಸಿದೆ.
ದಿನಾಂಕ 22.05.224ರಂದು ಶ್ರೀ ಲಕ್ಷ್ಮೀನೃಸಿಂಹ ಜಯಂತಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತೆ ಆಯೋಜಿಸಲಾಗುವುದು-
ಗಣಪತಿಪೂಜಾ,ಅನ್ನೋದಕಾನಯನಂ,ಪುಣ್ಯಾಹ, ಲಘ್ರಧಿವಾಸ ಹೋಮ,ರಥಶುದ್ದಿ ಹೋಮ,ರಥಶುದ್ಧಿ, ಅಧಿವಾಸ ಕಲಶಾಭಿಷೇಕ,ಶತರುದ್ರ ಅಭಿಷೇಕ, ಫಲಪಂಚಾಮೃತ ಅಭಿಷೇಕ,ಮಹಾಪೂಜೆ, ಮಂಗಳಾರತಿ,ತೀರ್ಥ ಪ್ರಸಾದ,ಮಹಾಸಂತರ್ಪಣೆ, ಹೊರೆಗಾಣಿಕೆ ಸಮರ್ಪಣೆ ಇತ್ಯಾದಿ.
ಸಂಜೆ: ಕಲಶ ಜಲ ಪ್ರೋಕ್ಷಣ,ಲಘ್ರಧಿವಾಸ ಹೋಮ, ಕಲ್ಲೋಕ್ತ ಮಹಾಪೂಜೆ,ಮಹಾರಥೋತ್ಸವ ಮೃಗಬೇಟೆ (ಮದ್ದು-ಗುಂಡು ಸೇವೆ),ಅಷ್ಟಾವಧಾನ ಸೇವೆ.
ಶ್ರೀ ಮಠದ ಶಿಷ್ಯರು,ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹ ಹಾಗೂ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಸ್ವರ್ಣವಲ್ಲಿ ಮಠದ ಪರವಾಗಿ ಶ್ರೀ ದತ್ತಾತ್ರಯ ಹೆಗಡೆ, ಲಿಂಗದಕೋಣ,ವ್ಯವಸ್ಥಾಪಕರು,ಶ್ರೀ ವಿಶ್ವೇಶ್ವರ ನ. ಹೆಗಡೆ ಬೊಮ್ನಳ್ಳಿ ಅಧ್ಯಕ್ಷರು,
ಹಾಗೂ ಶ್ರೀ ಮಠದ ಆಡಳಿತ ಮಂಡಳಿ ಹಾಗೂ ಸರ್ವ ಸಂಘಟನೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ