ಮಹಾರಾಷ್ಟ್ರ:ಸೊಲ್ಲಾಪೂರ ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ವನ್ನು ಹೊಂದಿದೆ ಪ್ರಮುಖವಾಗಿ ಡಾ.ಮಧುಭಾಲಾ ಲಿಗಾಡೆ, ಡಾ.ಸುಜಾತಾ ಶಾಸ್ತ್ರಿ ದಿನೇಶ ಚವ್ಹಾಣ್,ಲಕ್ಷ್ಮೀ ದೊಡ್ಡಮನಿ,ನಿಂಗಯ್ಯಾ ಸ್ವಾಮಿ,ಕಾಶೀನಾಥ ಮಣ್ಣು ರೆ,ಆಶ್ವಿನಿ ಜಮ ಶೆಟ್ಟಿಯಂತಹ ಸಾಹಿತಿಗಳ ಸಾಲಿನಲ್ಲಿ ಕಂಡು ಬರುವ ಗಿರಿಮಲ್ಲ ಅಣ್ಣಪ್ಪ ಹವಲ್ದಾರರು ಸಹ ಒಬ್ಬರು.ಅಕ್ಕಲಕೋಟ ತಾಲೂಕಿನ ಅಂಕಲಗೆ ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹವಲ್ದಾರ ರವರು ಕನ್ನಡ ಮಕ್ಕಳ ಬಗ್ಗೆ ಸಣ್ಣ ಸಣ್ಣ ಕಥೆಗಳನ್ನು ಕಟ್ಟಿ ಮಕ್ಕಳಲ್ಲಿ ಬೌದ್ಧಿಕ ಮಟ್ಟ ಹೆಚ್ಚಿಸಲು ಅದರ ಜೊತೆಗೆ ನೈತಿಕ ಶಿಕ್ಷಣ ಬಗ್ಗೆ ಒತ್ತು ನೀಡಿದ್ದಾರೆ ಸ್ಟತಃ ಸಾಹಿತಿಯಾಗಿರುವ ಇವರ ನೂರಾರು ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಇವರು ಬರೆದಿರುವ ದಿನಕ್ಕೊಂದು ಕಥೆ ಮಕ್ಕಳ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದೆ ಸರಳ ಹಾಗೂ ಅರ್ಥಪೂರ್ಣವಾದದು..
ಸಿಂಹರಾಜಾ ನಾವು ದಿನಾಲು ನಿನಗೆ ಸರದಿಯಂತೆ ಮೊಲವನ್ನು ಕಳಿಸುತ್ತೇವೆ ನೀನು ಯಾರಿಗೂ ತೊಂದರೆ ಕೊಡಬೇಡ ಆದರೆ ಸಿಂಹ ಒಪ್ಪಿ ದಿನಾಲು ಮೊಲವನ್ನು ಹಾಕುತ್ತಿತ್ತು ಅದರಾಗ ಒಂದು ಮುದಿಮೊಲ ಹೇಗಾದರೂ ಮಾಡಿ ಸಿಂಹವನ್ನು ಕೊಂದುಹಾಕಬೇಕು ವಿಚಾರ ಮಾಡಿ ಆ ಮೊಲ ಬಾವಿಯ ಕಡೆಗೆ ಕರೆತಂದು ನೋಡಲ್ಲಿ ಬಾವಿಯಲ್ಲಿ ಕಂಡ ಪ್ರತಿಬಿ ಬಿಂಬ ನೋಡಿ ಸಿಂಹ ತನ್ನದೇಯಾದ ನೆರಳು ಕಂಡು ಬಾವಿಯ್ಯಾಗ ಜಿಗಿದು ಸತ್ತುಹೋಯಿತು ಉಪ್ಪು ತಿಂದವರು ನೀರು ಕುಡಿಯ ಬೇಕು ಇಂದಿನ ದಿನಮಾನಕ್ಕೆ ಈ ಸೂಕ್ತವಾದದು.
ನಾಗರ ಹಾವು ಬಹಳ ಮಂದಿಗೆ ಕಡಿದಿತ್ತ ಇದರಿಂದ ಬಹಳ ಮಂದಿ ಸತ್ತ ಹೋಗಿದ್ದರ ಒಂದು ದಿನ ಸಾಧು ಆ ದಾರಿಯ್ಯಾಗ ಹೊಂಟಿದ್ದ ಹಾವ ಅವನ ಕಡಿಲ್ಯಾಕ ಹೋಯಿತ್ತ ಸಾಧು ತನ್ನ ಮಂತ್ರದಿಂದ ಹಾವಿನ ಶಕ್ತಿ ಕಡಿಮೆ ಮಾಡಿದ ಮಿತ್ರ ನೀ ನನ್ನ ಕೊಲ್ಲಬೇಕೆಂದು ಮಾಡಿದ್ದೆ ಎಷ್ಟೊ ಮಂದಿಗೆ ಕೊಂದಿರುವೆ ಯಾರಿಗೂ ತೊಂದರೆ ಕೊಡಬೇಡ ಅದಕ್ಕ ಹಾವ ಒಪ್ಪಿ ಹುತ್ತದಲ್ಲಿ ಸೇರಿಕೊಂಡಿತ್ತು ಸ್ವಲ್ಪ ದಿನ ಆತು ಹಾವ ಕಡಿಯುವುದಿಲ್ಲ ದಿನ ಕಾಯುವ ಹುಡುಗರು ಹಾವಿಗೆ ತ್ರಾಸ ಮಾಡ್ಯಾಕ ಶುರು ಮಾಡಿದರ ಒಂದು ದಿನ ಹೆಂಗಸ ನೀರಿಗೆ ಬಂದಾಗ ಸಿಂಭೆ ಇರಲಿಲ್ಲ ಆಗ ಅವಳು ಹಾವಿನ ಸಿಂಭೆ ಮಾಡಿಕೊಂಡು ಹೊರಟಳು ದಾರಿಯ್ಯಾಗ ಬೆಟ್ಟಿಯಾದ ಸಾಧು ಹೇಳಿದ ಇನ್ನ ಮ್ಯಾಲ ನಿನ್ನ ಆತ್ಮರಕ್ಷಣೆ ಮಾಡಿಕೊ ಸಾಧು ಹೇಳಿದ ಹಾಗೆ ಹಾವ ಬುಸ್ ಅಂದಿತು ಶಬ್ಧ ಕೇಳಿದ ಹೆಂಗಸ ಕೊಡ ಚೆಲ್ಲಿ ನಿಂತಳು ಅಂಜಿದರ ಮಣ್ಣನ್ಯಾಗ ಮುಚ್ಚ ತ್ತಾರ ಈ ಕಥೆಯ ವಸ್ತುಸ್ಥಿತಿ.
ಅಮೇರಿಕಾ ಶಾಲೆ ಯ್ಯಾಗ ಬಾಲಕರ ವಿಶ್ರಾಂತಿ ವೇಳೆದಾಗ ಒಂದೊಂದು ಕೆಲಸ ಮಾಡಿ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಾರೆ ಅದರಾಗ ಒಬ್ಬ ಬಾಲಕ ದಾರಿಯ್ಯಾಗ ಪೇಪರ ಮಾರುತ್ತಾ ಇದ್ದ ಒಬ್ಬ ದೊಡ್ಡ ಅಧಿಕಾರಿಗೆ ಒತ್ತಾಯ ಮಾಡಿ ಒಂದ ಪೇಪರ ಕೊಟ್ಟ ಅವರ ಹತ್ತಿರ ಚಿಲ್ಲರ ಇರಲಿಲ್ಲ 8-10 ನಿಮಿಷ ಬಾಲಕನ ದಾರಿ ನೋಡಿ ಡಾಲರ್ ಕಳೆದು ಹೋಯಿತು ರಾತ್ರಿ ಅಂದಿನ ರಾತ್ರಿ ಪೇಪರ್ ಓದುವಾಗ ಅಧಿಕಾರಿಯ ಗಮನ ಅಕ್ಷರ ಮ್ಯಾಲ ಬಿತ್ತು ಮೋಟರ ಗಾಡಿ ಟಕ್ಕರದಿಂದ ಗಾಯವಾಗಿ ಬಿದ್ದಿದ್ದಾನೆ ದೊಡ್ದ ಅಧಿಕಾರಿ ಆಸ್ಪತ್ರೆಗೆ ಹೋಗುತ್ತಾನೆ ಬಾಲಕ ಅವರಿಗೆ ನಮಸ್ಕಾರ ಮಾಡಿದ ಅಧಿಕಾರಿ ಬಾಲಕ ತೋರಿದ ಕಡೆ ನೋಡಿದಾಗ ಚಿಲ್ಲರೆ ಹಣವಿತ್ತು ಅಧಿಕಾರಿಗೆ ನೀಡಿ ಸಾಹೇಬರೇ ನಾನು ಈಗ ಸತ್ತರೂ ಚಿಂತೆಯಿಲ್ಲ ತಮ್ಮ ಹಣವನ್ನು ಮುಟ್ಟಿಸಲಾರದೇ ಹಾಗೆಯೇ ಸತ್ತಿದ್ದರೆ ನಿಮಗೆ ಬಡವರ ಮೇಲಿನ ವಿಶ್ವಾಸ ಹೋಗುತ್ತಿತ್ತು ನಂಬಿಕೆ ಮನುಷ್ಯನ ಅಸ್ತಿ ಇದನ್ನು ಉಳಿಸಿಕೊಂಡು ಹೋಗಬೇಕು…
ಹೀಗೆ ಪ್ರತಿಯೊಂದು ಕಥೆ ಜೀವನದ ಪಾಠ ಹೇಳುತ್ತದೆ ಸಾಧನೆಯ ದಾರಿ ತೋರಿಸುವ ದಿನಕ್ಕೊಂದು ಕಥೆ ಅರ್ಥಪೂರ್ಣವಾಗಿವೆ.
ಲೇಖಕರಾದ ಗಿರಮಲ್ಲ ಹವಲ್ದಾರ್ ರವರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಸಾಗಲಿ ಇನ್ನೂ ಅನೇಕ ಕೃತಿಗಳು ಮೂಡಿಬರಲಿ ಶುಭಾಶಯಗಳೊಂದಿಗೆ…
ಲೇಖಕರು-ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ