ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೈಕ್ಷಣಿಕ ಸುಧಾರಣೆಗೆ ಎಲ್ ವೈ ರಾಜೇಶ್ ಮಾದರಿಅನುಸರಿಸಿದ ರಾಜ್ಯ ಸರ್ಕಾರ

ಶೈಕ್ಷಣಿಕ ವರ್ಷದ ಮೊದಲ ಮೆಟ್ಟಿಲು ಎಸ್ ಎಸ್ ಎಲ್ ಸಿ. ಮಗ/ಮಗಳು ಎಸ್ ಎಸ್ ಎಲ್ ಸಿ ಪಾಸಾದರು ಎಂದರೆ ನಿಟ್ಟುಸಿರು ಬಿಡುವ ಪಾಲಕರು ಅದೆಷ್ಟೋ ಮಂದಿ ಹಾಗೆಯೇ ಕಡಿಮೆ ಅಂಕ ಪಡೆದವರು ಹಾಗೂ ಫೇಲಾದವರ ಚಿಂತೆ ಮತ್ತೊಂದು ಮಾನಸಿಕ ಖಿನ್ನತೆಗೆ ಒಳಗಾಗುವವರು,ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸುವವರು,ಓದಿನ ಕನಸಿಗೆ ಕಡಿವಾಣ ಹಾಕಿ ಬಾಳ ಬಂಧನಕ್ಕೆ ಒಳಗಾಗುವವರು ಕೆಲವರು,ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗುವವರು.ಇಂತಹ ಪ್ರವೃತ್ತಿ ಮಕ್ಕಳಲ್ಲಿ ಮಾತ್ರವಲ್ಲ ಪೋಷಕರಲ್ಲಿಯೂ ಗುರುತಿಸ ಬಹುದಿತ್ತು.ರ್ಯಾಂಕ್ ಪದ್ದತಿಯೇ ಎಸ್ ಎಸ್ ಎಲ್ ಸಿ ಮಾನದಂಡವಾಗಿದ್ದ ಕಾಲಘಟ್ಟ ಈಗಿಲ್ಲ,ಆದರೆ ಪಠ್ಯ ಕ್ರಮವನ್ನು ಮತ್ತು ಪರೀಕ್ಷೆಗಳನ್ನು ಸರಳವಾಗಿ ಎದುರಿಸುವಂತೆ ಮಾಡಲಾಗಿದೆ.ಕಾಪಿ ಚೀಟಿ,ಕಾಪಿ ಮಾಡುವ ಕ್ರಮಗಳಿಗೆ ಕಡಿವಾಣ ಬಿದ್ದಿದೆ. ಈ ಎಲ್ಲಾ ಕ್ರಮಗಳು ಮಕ್ಕಳು ಮತ್ತು ಪೋಷಕರ ಮೇಲಿನ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ಆದರೆ ನಾಯಿ ಕೊಡೆಗಳಂತೆ ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳು ಕೂಡ ಇರುವ ವ್ಯವಸ್ಥೆಯಲ್ಲಿಯೇ ಸಡ್ಡು ಹೊಡೆಯುತ್ತಿವೆ. ಈ ಶೈಕ್ಷಣಿಕ ಸಾಲಿನಲ್ಲಿ ಬದಲಾದ ಪರೀಕ್ಷಾ ಪದ್ದತಿ ಮತ್ತು ನಿಗಾವಣೆಯ ಆಧುನೀಕರಣದಿಂದ ಎಸ್ ಎಸ್ ಎಲ್ ಸಿ ಪಲಿತಾಂಶ ಕುಸಿದಿದೆ.ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಫೇಲಾದ/ಅಂಕಗಳನ್ನು ಉತ್ತಮ ಗೊಳಿಸಿ ಕೊಳ್ಳುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಜೊತೆಗೆ ವಿಶೇಷ ತರಗತಿ ಮತ್ತು ಮದ್ಯಾಹ್ನದ ಬಿಸಿ ಊಟದ ವ್ಯವಸ್ಥೆಗೊಳಿಸಿದೆ ಸರ್ಕಾರದ ತ್ವರಿತ ಕ್ರಮ ಅಭಿನಂದನಾರ್ಹ.
ಇದೇ ವೇಳೆಗೆ ಇಂತಹದ್ದೆ ಒಂದು ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯ ಕ್ರಿಯಾಶೀಲ ಅಧಿಕಾರಿಯೊಬ್ಬರು ಕಳೆದ ಎರಡು ವರ್ಷಗಳಿಂದ ಕಾಳಜಿ ವಹಿಸಿ ಮಾಡುತ್ತಿದ್ದಾರೆ.ಫೇಲಾದ ವಿದ್ಯಾರ್ಥಿಗಳನ್ನು ಗುರುತಿಸಿ,ಉತ್ತಮ ಶಿಕ್ಷಕರನ್ನು ಆಯ್ದು ಭೋದನೆ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಿ ಯಶಸ್ಸು ಸಾಧಿಸಿ ಮುಂದಿನ ಶೈಕ್ಷಣಿಕ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಖದರ್ ಖಾಕಿ ವ್ಯವಸ್ಥೆಯ ಒಳಗೆ ಇಂತಹದ್ದೊಂದು ಮಾನವೀಯ ಗುಣವನ್ನು ಸಾರ್ಥಕಗೊಳಿಸಿಕೊಂಡವರು ಈ ಹಿಂದೆ ಬೆಂಗಳೂರು ನಗರದ ಬಂಡೇಪಾಳ್ಯದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಎಲ್ ವೈ ರಾಜೇಶ್.

ಸಧ್ಯ ರಾಜೇಶ್ ಈಗ ಹೆಬ್ಬಾಳ ಲೋಕಾಯುಕ್ತ ಎಸ್ ಐಟಿಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪೊಲೀಸ್ ಇಲಾಖೆಯ ಕಾರ್ಯಗಳನ್ನು ಜನಸ್ನೇಹಿಯಾಗಿಸಿ ಹೆಸರು ಮಾಡಿದ್ದ ಎಲ್ ವೈ ರಾಜೇಶ್ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಇಂತಹದ್ದೊಂದು ಯೋಜನೆಯನ್ನು ಸಮಾನ ಮನಸ್ಕರ ಸಹಕಾರದೊಂದಿಗೆ ಅನುಷ್ಟಾನಕ್ಕೆ ತಂದಿದ್ದರು.ಸರ್ಕಾರ ಈಗ ಇದೇ ಮಾದರಿಯನ್ನು ಇಡೀ ರಾಜ್ಯದಲ್ಲಿ ಜಾರಿಗೆ ತರುವ ಆದೇಶ ಹೊರಡಿಸಿ ಕಾರ್ಯ ಪ್ರವೃತ್ತವಾಗಿದೆ.ಇದು ಫೇಲಾದವರ ಬದುಕಿನ ಆಸೆ ಚಿಗುರೊಡೆಯುವಂತೆ ಮಾಡಿದೆ.
ಎಲ್ ವೈ ರಾಜೇಶ್ ರ ಇಂತಹ ಸಮಾಜ ಮುಖಿ ಯೋಜನೆಯ ಬಹಳಷ್ಟು ಫಲಾನುಭವಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿ ಕೊಂಡಿದ್ದಾರೆ. ಆರ್ಥಿಕವಾಗಿ ದುರ್ಬಲರಿದ್ದು,ಸರ್ಕಾರಿ ಶಾಲೆಗಳಲ್ಲಿ ಓದುತ್ತ ಸಾಮಾಜಿಕ ಕಾರಣಗಳಿಂದ ಫೇಲಾದ ಮಕ್ಕಳು,ಇನ್ಸ್ ಪೆಕ್ಟರ್ ರಾಜೇಶ್ ನೆರವಿನಿಂದ ಇಂದು ಶೈಕ್ಞಣಿಕ ಬದುಕಿನ ಸಾಫಲ್ಯತೆಯೆಡೆಗೆ ಹೆಜ್ಜೆ ಇಟ್ಟಿದ್ದಾರೆ.ಪ್ರತಿ ಮಕ್ಕಳ ಕಲಿಕೆಯ ಪ್ರಗತಿಯನ್ನು ಗಮನಿಸುತ್ತಾ, ಸ್ಪೂರ್ತಿದಾಯಕವಾದ ಮಾತುಗಳನ್ನು ಆಡುತ್ತಾ, ಕುಟುಂಬದ ಸಂಕಷ್ಟಗಳ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ರಾಜೇಶ್ ಜನಾನುರಾಗಿಯಾಗಿದ್ದಾರೆ.ಯಶಸ್ಸು ಕಂಡವರಿಗೂ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ನೀಡುವಲ್ಲಿ ಮತ್ತು ಪರಿಚಿತರಿಂದ ನೆರವು ನೀಡಿಸುವುದರಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.
ವೃತ್ತಿ ಬದುಕಿನ ಬ್ಯುಸಿ ಕೆಲಸಗಳ ನಡುವೆಯೂ ರಾಜೇಶ್ ಅವರ ಸಮಾಜ ಮುಖಿ ಕೆಲಸಗಳು ಇತರರಿಗೆ ಮಾದರಿಯಾಗಿವೆ.ರಾಜ್ಯ ಸರ್ಕಾರ ಅದೇ ಮಾದರಿಯನ್ನು ಅನುಸರಿಸಿರುವುದು ರಾಜೇಶ್ ಅವರ ಪರಿಶ್ರಮಕ್ಕೆ ಮತ್ತೊಂದು ಹೆಮ್ಮೆಯ ಗರಿ ದಕ್ಕಿದಂತಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ