ಬಳ್ಳಾರಿ/ಸಿರುಗುಪ್ಪ.ಮೇ-21:ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಕೆಂಚನಗುಡ್ಡ ಗ್ರಾಮದಿಂದ ಸಿರುಗುಪ್ಪ ನಗರ ಮಾರ್ಗವಾಗಿ ಇಬ್ರಾಂಪುರ ಗ್ರಾಮದ ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಆಹಾರ ನಿರೀಕ್ಷಕ ಟಿ ಮಹೇಶ್ ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದ್ದು ಹಳೇ ಕೆಂಚನಗುಡ್ಡ ರಸ್ತೆಯಿಂದ ಸಿರುಗುಪ್ಪ ನಗರದ ಮುಖಾಂತರ ಇಬ್ರಾಂಪುರ ಗ್ರಾಮದ ಕಡೆಗೆ ಕೆ ಎ 34 ಸಿ 1964 ಆಶೋಕ ಲೈಲ್ಯಾಂಡ್ ಲಗೇಜ್ ಆಟೋದಲ್ಲಿ ಇಬ್ರಾಂಪುರ ಗ್ರಾಮ ವಾಸಿ 33ವರ್ಷದ ಮಲ್ಲಿಕಾರ್ಜುನ ಅಕ್ರಮವಾಗಿ ನಲವತ್ತು ಕ್ವಿಂಟಲ್ ತೂಕದ,ಒಂದು ಲಕ್ಷದ ಹದಿನಾರು ಸಾವಿರ ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಜಪ್ತಿ ಮಾಡಲಾಗಿದೆ.ಸದರಿ ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಣೆಯಾಗುವ ಪಡಿತರ ಅಕ್ಕಿಯಾಗಿದ್ದು ಇವುಗಳನ್ನು ಅಕ್ರಮ ಸಾಗಾಣಿಕೆ ಮಾಡುತ್ತಿದ್ದು ಸದರಿ ಕೃತ್ಯದ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ಪದ್ಧತಿ) ನಿಯಂತ್ರಣ ಆದೇಶದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ
ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.