ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಪುರಾಣಿರವರು ಯಡ್ರಾಮಿ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳು ಮತ್ತು ದೂರುಗಳನ್ನು ಆಲಿಸಿ ಸ್ಪಂದಿಸಿ ತಕ್ಷಣವೇ ಪರಿಹರಿಸುತಿದ್ದಾರೆ ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂದು ಯಡ್ರಾಮಿ ತಾಲ್ಲೂಕಿನ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಯಡ್ರಾಮಿ ತಾಲೂಕಿನಲ್ಲಿರುವ ಎಲ್ಲಾ ಪಂಚಾಯಿತಿಗಳಲ್ಲಿ ಯಾವುದೇ ಸಮಸ್ಯೆ ಅಥವಾ ದೂರುಗಳು ಬಂದರೆ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ಮಾಡಿ ಯಾರ ಒತ್ತಡಕ್ಕೆ ಒಳಗಾಗದೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಅದೇ ರೀತಿಯಾಗಿ ಯಡ್ರಾಮಿ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ ಯಾವುದೇ ವಿದ್ಯಾರ್ಹತೆ ಇಲ್ಲದವರೂ ಸಹ ಪತ್ರಕರ್ತರಾಗಿ ಐ ಡಿ ಪಡೆದುಕೊಂಡು ನಾವು ಪತ್ರಕರ್ತರು ಎಂದು ಹೇಳಿ “ರೋಲ್ ಕಾಲ್” ಮಾಡುತ್ತಿದ್ದಾರೆ ಮತ್ತು ಅಧಿಕಾರಿಗಳನ್ನು ಹೆದರಿಸಿ ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಪತ್ರಕರ್ತರ ಸ್ಥಾನಕ್ಕೆ ಕಳಂಕ ತರುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.ನಕಲಿ ಪತ್ರಕರ್ತರನ್ನು ಹುಡುಕಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಅವರನ್ನು ಜೈಲಿಗೆ ಕಳಿಸುವಂತ ಕೆಲಸ ಆಗಬೇಕಾಗಿದೆ ಎಂದು
ದಲಿತ ಸೇನೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಾದ ಭೀಮ್ ಪುತ್ರ ಅಮರ್ ಬೊಮ್ಮನಹಳ್ಳಿ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವರದಿ:ಸಿ ಎಸ್ ಪಾಟೀಲ್