ಬೆಂಗಳೂರು:ರಂಗಾಸಕ್ತರಿಗೆ ನಾಟಕ ಪ್ರದರ್ಶನಗಳ ರಸಗವಳ ನೀಡುವಲ್ಲಿ ಹೆಸರು ವಾಸಿಯಾಗಿರುವ ಬೆಂಗಳೂರಿನ “ಸಂಧ್ಯಾ ಕಲಾವಿದರು” ತಂಡವು ತಾನು ಅಭಿನಯಿಸುವ ಜನಪ್ರಿಯ ನಾಟಕ “ಸುಯೋಧನ” (ಮಹಾಭಾರತಕ್ಕೊಂದು ಹೊಸ ಆಯಾಮ) ಪ್ರದರ್ಶನವನ್ನು ಇದೇ ಬರುವ ಜೂನ್ 7 ಶುಕ್ರವಾರದಂದು ಸಂಜೆ ಏಳು ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ಇಲ್ಲಿ ನಡೆಸಿಕೊಡುವರು ಎಂದು ರಂಗಕರ್ಮಿ, ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ವೈ.ಕೆ.ಸಂಧ್ಯಾ ಶರ್ಮಾ ಹಾಗೂ ನಟ ನಿರ್ದೇಶಕ,ಸಾಹಿತಿ ಶ್ರೀ ಎಸ್.ವಿ. ಕೃಷ್ಣ ಶರ್ಮಾ ಅವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
