ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸರ್ಕಾರಿ ಭೂಮಿ ರಕ್ಷಿಸಿ ಅಕ್ರಮ ಸಾಗುವಳಿ ನಿಲ್ಲಿಸಿ ತಹಶೀಲ್ದಾರರ ವಿರುದ್ಧ ಸಿಡಿದೆದ್ದ ಕೆ ಆರ್ ಎಸ್ ಪಕ್ಷ

ರಾಯಚೂರು:ಇಂದಿನ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಬೇರಿಗೆ ಗ್ರಾಮದ ಜಮೀನು ಸರ್ವೆ ನಂಬರ್ 10 // ಕ್ಷೇತ್ರ 40 ಎಕರೆ 18 ಗುಂಟೆ ಪರಂಪೋಕ್ ಜಮೀನಿದ್ದು ಮತ್ತು ಜಮೀನು ಸರ್ವೆ ನಂಬರ್ 96/*/ ಎಕರೆ ಖಾರಿಜಾತ ಜಮೀನಿದ್ದು ಈ ಜಮೀನುಗಳು ಸರ್ಕಾರಿ ಜಮೀನುಗಳಾಗಿದ್ದು ಇಲ್ಲಿ ಕುರಿಗಾಗಿ ದನಗಾಹಿಗಳು ತಮ್ಮ ತಮ್ಮ ರಾಸುಗಳನ್ನು ಮೇಯಲು ಅನುಕೂಲವಾಗುತ್ತದೆ ಎಂದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಆಗಿರುತ್ತದೆ.

ಈ ಮಧ್ಯದಲ್ಲಿ ಅರಣ್ಯ ಇಲಾಖೆಯವರು ಈ ಜಮೀನುಗಳಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದ್ದು ಅಲ್ಲದೆ ಅಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಿದ್ದು ನಮ್ಮ ಪಕ್ಷದ ವತಿಯಿಂದ ತಹಸಿಲ್ದಾರರು ಸಿಂಧನೂರಿಗೆ ದೂರನ್ನು ನೀಡಿದ್ದು ಅವರು ಅದಕ್ಕೆ ಸ್ಪಂದನೆ ಮಾಡಿ ಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದು ಪತ್ರ ಸಂಖ್ಯೆ ಸಂ/ಕಂ/ಎಂಎ. ಬಿ/ಅರಣ್ಯ/71/22-23 ದಿನಾಂಕ 29-09-2022 ಇದ್ದು ಅರಣ್ಯ ಇಲಾಖೆಯವರಿಗೆ ಸ್ಪಷ್ಟವಾಗಿ ಈ ಜಮೀನುಗಳು ಕಂದಾಯ ಇಲಾಖೆಗೆ ಸೇರಿದ್ದು ಈ ಜಮೀನುಗಳಲ್ಲಿ ರಾಸುಗಳಿಗೆ ಮೇಯಲು ತೊಂದರೆಯಾಗಬಾರದು ಮತ್ತು ಈಗಾಗಲೇ ನೆಟ್ಟಿರುವ ಸಸಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಮಾತ್ರ ಸೂಚಿಸಿದ್ದು ಇರುತ್ತದೆ.

ಆದರೆ ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಜಮೀನುಗಳನ್ನು ಅನಧಿಕೃತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗುವಳಿ ಮಾಡುತ್ತಿರುವುದು ಈ ವಿಷಯವನ್ನು ಕೂಡಾ ದಿನಾಂಕ 17.05.2024 ರಂದು ನಮ್ಮ ಪಕ್ಷದ ವತಿಯಿಂದ ತಹಶೀಲ್ದಾರರಿಗೆ ಮನವಿಯ ಮೂಲಕ ಅವರ ಗಮನಕ್ಕೆ ತರಲಾಗಿದೆ.ಆದರೆ ಈ ವಿಷಯವಾಗಿ ಅವರಿಂದ ಈವರೆಗೂ ಕ್ರಮ ಜರುಗಿಸಿರುವುದಿಲ್ಲ ಅಂದರೆ ಇಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಲು ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಪಟ್ಟ-ಭದ್ರ ಹಿತಾಸಕ್ತಿ ಅವರೊಂದಿಗೆ ಶಾಮಿಲ್ ಆಗಿರುವ ಶಂಕೆ ಉಂಟಾಗಿದೆ ಈಗಾಗಲೇ ಅನಧಿಕೃತವಾಗಿ ಈ ಜಮೀನುಗಳಲ್ಲಿ ಪ್ರವೇಶ ಮಾಡಿದವರು ಯಾರ ಅನುಮತಿ ಇಲ್ಲದೆ ಗಿಡಗಂಟೆಗಳನ್ನು ಕಡಿದು ಹಾಕಿ ಈ ಜಮೀನುಗಳಲ್ಲಿ ಪರಿಸರ ನಾಶ ಮಾಡಿದ್ದಾರೆ.ಇದು ಕಾಯ್ದೆಗೆ ವಿರುದ್ಧವಾಗಿದ್ದು ಕಾಯ್ದೆ ಪ್ರಕಾರ ಇವರ ವಿರುದ್ಧ ಕ್ರಮ ಜರುಗಿಸುವುದು ಕೂಡಾ ಅವಶ್ಯಕವಾಗಿದೆ
ಒಂದು ವಾರದೊಳಗಾಗಿ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆ ಇತರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಿದೆ ಹೋದಲ್ಲಿ ಮತ್ತು ಅನಧಿಕೃತವಾಗಿ ಪ್ರವೇಶ ಮಾಡಿದವರು ವಿರುದ್ಧ ಕ್ರಮ ಜರುಗಿಸಿದೆ ಇದ್ದಲ್ಲಿ ಚಿಕ್ಕ ಬೇರಿಗೆ ಗ್ರಾಮದ ಕುರಿಗಾಹಿಗಳ ಕುರಿಗಳೊಂದಿಗೆ ಮತ್ತು ದನಗಾಹಿಗಳ ದನಗಳೊಂದಿಗೆ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿರುಪಾದಿ ಕೆ ಗೋಮರ್ಸಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ರಾಯಚೂರು ಜಿಲ್ಲಾ ಯುವ ಘಟಕದ ಕಾರ್ಯದರ್ಶಿ,ದ್ಯಾವಣ್ಣ ನಾಯಕ್ ಪುಲದಿನ್ನಿ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ ತಾಲೂಕ ಸಂಘಟನಾ ಕಾರ್ಯದರ್ಶಿ ಅಜಿದ್ ಪಾಷಾ ಹಾಗೂ ಪಕ್ಷದ ಮುಖಂಡರಾದ ಶರಣಪ್ಪ ಬೇರ್ಗಿ,ಬೀರಪ್ಪ,ಸೋಮಣ್ಣ,ಶಿವಗ್ಯಾನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ